ಬೆಂಗಳೂರು: ದಕ್ಷಿಣ ಬೆಂಗಳೂರಿನ ಹಲವೆಡೆ ವಿರಾಮದ ನಂತರ ಮತ್ತೆ ಭಾರೀ ಮಳೆಯಾಗುತ್ತಿದೆ
ಉತ್ತರ ಅಂಡಮಾನ್ ಸಮುದ್ರದಲ್ಲಿನ ವಾಯುಭಾರ ಕುಸಿತವು ಚಂಡಮಾರುತವಾಗಿ ತೀವ್ರಗೊಂಡಿರುವುದರಿಂದ ವಾರದಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಐಎಮ್ ಡಿ ಪ್ರಕಾರ, ಗುರುವಾರ, ಮಾರ್ಚ್ 24 ರವರೆಗೆ ನೈಋತ್ಯ ಕರ್ನಾಟಕದ ಮೇಲೆ ಮಳೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಇಂದು ಸಂಜೆ ಬೆಂಗಳೂರು ದಕ್ಷಿಣದ ಹಲವೆಡೆ ಹೊಸೂರು ರಸ್ತೆ, ಆರ್‌ಬಿಐ ಲೇಔಟ್, ಜೆಪಿ ನಗರ, ಅರೆಕೆರೆ, ಕೊತ್ತನೂರುದಿನ್ನೆ, ಹುಳಿಮಾವು ಪ್ರದೇಶದಲ್ಲಿ ಭಾರೀ ಮಳೆಯಾಗಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್,
ಬೆಂಗಳೂರು
PublicNext
21/03/2022 10:53 pm