ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ವರ್ಲ್ಡ್ ವೆಟ್ ಲ್ಯಾಂಡ್ ಡೇ: ಅರ್ಕಾವತಿಯಲ್ಲಿ ಪಕ್ಷಿಗಳ ಪ್ರಪಂಚ

ದೊಡ್ಡಬಳ್ಳಾಪುರ: ಪ್ರಕೃತಿಯ ಮಡಿಲಲ್ಲಿ ಮುಗ್ಧ ಪಕ್ಷಿಗಳ ಪ್ರಪಂಚವೇ ಚಂದ, ಸ್ವಚ್ಛಂದವಾಗಿ ಹಾರಾಡುತ್ತವೆ, ನೋಡುಗರಿಗೆ ಹರುಷ ನೀಡುತ್ತಾ, ತಮ್ಮ ಲೋಕದಲ್ಲಿ ತೇಲಾಡುತ್ತಿರುತ್ತವೆ.

ಇವುಗಳನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಮುದ. ಹಕ್ಕಿಗಳ ಬಣ್ಣ, ಹಾರಾಟ ಹಾಗೂ ಕೂಗು ಎಲ್ಲವೂ ಮನಸ್ಸಿಗೆ ನಿರಾಳವಾದ ಅನುಭವ ನೀಡುತ್ತವೆ.

ಸದ್ಯ ಜೌಗು ಪ್ರದೇಶ, ನದಿ, ಕೆರೆ, ಜಲಾಯನ ಪ್ರದೇಶಗಳು ಪಕ್ಷಿಗಳಿಗೆ ಆಶ್ರಯ ಮತ್ತು ಆಹಾರದ ಮೂಲವಾಗಿದ್ದು, ವರ್ಲ್ಡ್ ವೆಟ್ ಲ್ಯಾಂಡ್ ಡೇ ಅಂಗವಾಗಿ ಪಕ್ಷಿಗಳ ವೀಕ್ಷಣೆ ಮತ್ತು ಸಮೀಕ್ಷೆಯನ್ನ ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯಿಂದ ಮಾಡಲಾಗಿದೆ.

ನೀರು ಮತ್ತು ಭೂಮಿ ಸೇರಿರುವ ಜಾಗವನ್ನು ನಾವು ವೆಟ್ ಲ್ಯಾಂಡ್ ಎಂದು ಕರೆಯುತ್ತೇವೆ. ಕೆರೆ, ಕುಂಟೆ, ಕಟ್ಟೆ, ಸರೋವರ, ನದಿ, ಕಾಲುವೆ, ಅಳಿವೆ, ಜೌಗು ಪ್ರದೇಶ, ಜಲಾಶಯಗಳ ಹಿನ್ನೀರು, ಹವಳ ದಂಡೆ, ಕಾಂಡ್ಲಾ ಕಾಡುಗಳು ವೆಟ್ ಲ್ಯಾಂಡ್ ಪ್ರದೇಶವಾಗಿದೆ.

ಫೆಬ್ರವರಿ 2, 1971 ರಲ್ಲಿ ಇರಾನ್ ನ ರಾಮ್ಸರ್ ಎಂಬ ಸ್ಥಳದಲ್ಲಿ ಜಗತ್ತಿನ ವೆಟ್ಲ್ಯಾಂಡ್ಸ್ ಗಳನ್ನು ಸಂರಕ್ಷಿಸಲು ಅಂತಾರಾಷ್ಟ್ರೀಯ ಒಪ್ಪಂದವಾಯಿತು. ಅದರ ಅಂಗವಾಗಿ ಹಲವು ದೇಶಗಳಲ್ಲಿ ಫೆಬ್ರವರಿ 2 ಮತ್ತು ಮೊದಲ ವಾರ ವಿಶ್ವ ವೆಟ್ಲ್ಯಾಂಡ್ಸ್ ದಿನವನ್ನು ಆಚರಿಸಲಾಗುತ್ತಿದೆ.

ಈ ತಿಂಗಳು ಪೂರ್ತಿ ತಾಲ್ಲೂಕಿನ ಅರ್ಕಾವತಿ ನದಿ ಪಾತ್ರದ ಪ್ರಮುಖ ಕೆರೆಗಳಲ್ಲಿ ಪಕ್ಷಿ ಸಮೀಕ್ಷೆ ನಡೆಸಲಾಗುವುದು, ಎರಡು ವರ್ಷಗಳ ಹಿಂದೆ 60 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ನಾಗರಕೆರೆಯಲ್ಲಿ ಗುರುತಿಸಲಾಗಿತ್ತು ಆದರೆ ಈ ವರ್ಷ 40 ಪ್ರಭೇದಕ್ಕೆ ಇಳಿದಿದೆ.

ಈ ಬಾರಿ ಮಳೆಗಾಲ ಮುಂದುವರಿದ ಪರಿಣಾಮ ಚಳಿಗಾಲದಲ್ಲಿ ಬರಬೇಕಾದರೆ ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಅರ್ಕಾವತಿ ನದಿ ಪಾತ್ರದಲ್ಲಿ ಸಾಮಾನ್ಯವಾಗಿ ಕಾಣುವ ವಲಸೆ ಪಕ್ಷಿಗಳನ್ನ ಗುರುತಿಸಲಾಗಿದೆ, ಯುರೋಪ್ ಖಂಡದಿಂದ ಬರುವ ಚಲುಕ ಬಾತು, ಸೂಜಿಬಾಲದ ಬಾತು, ಬಿಳಿ ಹುಬ್ಬಿನ ಬಾತು, ಜೌಗು ಸೆಳೆವ, ಅಡವಿ ಗದ್ದೆಗೊರವ, ಗದ್ದೆಗೊರವ, ಕವಲು ತೋಕೆ , ಗುಲಾಬಿ ಕಬ್ಬಕ್ಕಿ , ಹಳದಿ ಸಿಪಿಲೆ ಪಕ್ಷಿಗಳು ವಲಸೆ ಬರುತ್ತವೆ.

Edited By : Manjunath H D
Kshetra Samachara

Kshetra Samachara

04/02/2022 08:22 pm

Cinque Terre

1.65 K

Cinque Terre

0

ಸಂಬಂಧಿತ ಸುದ್ದಿ