ವರದಿ: ಹರೀಶ್ ಗೌತಮಾನಂದ
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಾಹಾರಿ ಸಫಾರಿಯಲ್ಲಿ ಕಾಡೆಮ್ಮೆ ಶ್ವೇತಾ ಮತ್ತು ಕುಂಮ್ಟಳ ತಲಾ ಒಂದು ಮರಿಗೆ ಜನ್ಮ ನೀಡಿದ್ದು, ಇಬ್ಬರು ಅತಿಥಿಗಳ ಆಗಮನದಿಂದಾಗಿ ಕಾಟಿ ಕುಟುಂಬ ಸದಸ್ಯರ ಸಂಖ್ಯೆ ಹತ್ತಕ್ಕೇರಿದೆ ಎಂದು ಬನ್ನೇರುಘಟ್ಟ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಇನ್ನು, ಅಪರೂಪದ ಕಾಟಿ ಸಂತತಿ ಅತಿ ಹೆಚ್ಚಾಗಿ ಕಾಣ ಸಿಗುವುದು ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ, ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಮಲ್ಲೇಷ್ಯಾದಲ್ಲಿ.
ಕಾಟಿ ಸಂತತಿಯನ್ನು ಭಾರತದ ಅಳಿವಿನಂಚಿನಲ್ಲಿರುವ ಜೀವಿಗಳು ಎಂದು ಗುರುತಿಸಲಾಗಿದೆ. ಹಾಗಾಗಿ ವನ್ಯಜೀವಿ ಸಂರಕ್ಷಣೆ ಕಾಯ್ದೆ ಒಂದರಡಿ ಇವು ಬರುತ್ತವೆ. ʼಇಂಟರ್ ನೇಷನಲ್ ಯೂನಿಯನ್ ಫಾರ್ ಕರ್ನ್ಸವೇಶನ್ ನೇಚರ್ʼ ಇವುಗಳನ್ನು ಕೆಂಪು ಪಟ್ಟಿಗೆ ಸೇರಿಸಿದೆ.
ಈ ಕೆಂಪು ಪಟ್ಟಿಗೆ ಸೇರಿದ ಭಾರತದ ಅಪರೂಪದ ಕಾಡೆಮ್ಮೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಫಾರಿಯಲ್ಲಿ 68 ಹೆಕ್ಟೇರ್ ಜಾಗದಲ್ಲಿ ಪೋಷಿಸಲಾಗುತ್ತಿದೆ. ಜೊತೆಗೆ ಜಿಂಕೆ ಮತ್ತು ಹುಲ್ಲೆಗಳೂ ಇಲ್ಲಿವೆ ಎಂದರು.
Kshetra Samachara
29/01/2022 09:15 pm