ಆನೇಕಲ್: ಒಂದು ಕಡೆ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಕೆರೆ... ಮತ್ತೊಂದೆಡೆ ಮಳೆಯಾಗಿದ್ದರೂ ಸಹ ತುಂಬದ ಕೆರೆ ಕುಂಟೆ. ಅಂದ ಹಾಗೆ ಈ ಎಲ್ಲ ದೃಶ್ಯಕ್ಕೂ ಸಾಕ್ಷಿಯಾಗಿದ್ದು ಆನೇಕಲ್ ದೊಡ್ಡಕೆರೆ.
ಇಡೀ ತಾಲೂಕಿಗೆ ದೊಡ್ಡಕೆರೆ ಎಂದೇ ಹೆಸರುವಾಸಿಯಾಗಿರುವ ಈ ಕೆರೆ 200 ಎಕರೆ ವ್ಯಾಪ್ತಿಯಿದೆ. ಆದರೆ, ಈ ಕೆರೆ ಎಷ್ಟೋ ವರ್ಷಗಳಿಂದ ತುಂಬಲೇ ಇಲ್ಲ! ತಾಲೂಕಿನಾದ್ಯಂತ ಅನೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದರೂ ಆನೇಕಲ್ ನ ದೊಡ್ಡಕೆರೆ ರಾಜಕಾಲುವೆಗಳ ಒತ್ತುವರಿಯಿಂದಾಗಿ ಸ್ವಲ್ಪವಾದರೂ ತುಂಬಿಲ್ಲ. ಈ ವಿಚಾರವಾಗಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು, ಬಹು ಇತಿಹಾಸವಿರುವ ಕೆರೆ ಇದಾಗಿದ್ದು, ಇದೀಗ ಕೆರೆಗೆ ಸಂಪರ್ಕಿಸುವ ಎಲ್ಲ ರಾಜಕಾಲುವೆಗಳು ಒತ್ತುವರಿಯಾಗಿವೆ. ಎಲ್ಲ ಕೆರೆಗಳು ಉಕ್ಕಿ ಹರಿಯುತ್ತಿದ್ದರೂ ಆನೇಕಲ್ ಕೆರೆಗೆ ಮಾತ್ರ ನೀರು ಬಾರದಿರುವುದಕ್ಕೆ ಸ್ಥಳೀಯರು ಬೇಸರಿಸಿದ್ದಾರೆ. ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತು, ರಾಜಕಾಲುವೆಗಳನ್ನೆಲ್ಲ ತೆರವು ಮಾಡಬೇಕಿದೆ. ಜೊತೆಗೆ ಈ ರೀತಿ ಸರಕಾರಿ ಭೂಮಿಯನ್ನು ಕಬಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಅನುಕೂಲ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
Kshetra Samachara
25/11/2021 10:04 pm