ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಬಿರುಮಳೆ ಪ್ರಹಾರ; ನಗರದಲ್ಲಿ 20 ಮನೆ ನೆಲಸಮ, ಪರಿಶೀಲನೆ

ದೊಡ್ಡಬಳ್ಳಾಪುರ: ಕಳೆದ 15 ದಿನಗಳಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ 20 ಮನೆಗಳು ನೆಲಕಚ್ಚಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆ ಕುಸಿದ ಸ್ಥಳಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ನಗರದ ಸಂಜಯನಗರ, ಚೌಡೇಶ್ವರಿ ಬೀದಿ, ರೋಜಿಪುರದಲ್ಲಿ ಮನೆ ಕುಸಿತ ಪ್ರಕರಣ ದಾಖಲಾಗಿವೆ. ಗೋಡೆ ಕುಸಿತದಿಂದ ಮನೆ ಕಳೆದುಕೊಂಡವರಿಗೆ ನಗರಸಭೆಯಿಂದ 10 ಸಾವಿರ ರೂ. ಮತ್ತು ತಾಲೂಕು ಆಡಳಿತದಿಂದ 10 ಸಾವಿರ ರೂ. ತಕ್ಷಣವೇ ಬಿಡುಗಡೆ ಮಾಡಲಾಗಿದೆ.

ಮನೆ ಕುಸಿತ ಪ್ರಕರಣಗಳಲ್ಲಿ ಕೆಲವರ ಹೆಸರಲ್ಲಿ ಖಾತೆಗಳು ಇಲ್ಲದಿರುವುದು ಮತ್ತು ಖಾತೆದಾರರು ಸಾವನ್ನಪ್ಪಿದ್ದರಿಂದ ಪರಿಹಾರದ ಹಣ ತಕ್ಷಣವೇ ಬಿಡುಗಡೆ ಮಾಡಲು ತಾಂತ್ರಿಕ ಸಮಸ್ಯೆ ಅಡ್ಡಿಯಾಗಿದೆ. ಶೀಘ್ರವೇ ಈ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

24/11/2021 02:17 pm

Cinque Terre

304

Cinque Terre

0

ಸಂಬಂಧಿತ ಸುದ್ದಿ