ವರದಿ: ಗಣೇಶ್ ಹೆಗಡೆ
ಬೆಂಗಳೂರು: ರಾಜಧಾನಿ ಬೆಂಗ ಳೂರಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ ಆಗುತ್ತಿವೆ. ಪರಿಣಾಮವಾಗಿ ಹಾನಿಗಳೂ ಸಂಭವಿಸುತ್ತಿವೆ.
ಶಂಕರಮಠ ವಾರ್ಡ್ ನಲ್ಲಿ ಮನೆ ಗೋಡೆ ಕುಸಿದು ಬಿದ್ದು, ಪಾತ್ರೆ ಮತ್ತಿತರ ಸಾಮಗ್ರಿ ಹಾನಿಗೊಳಗಾಗಿವೆ.
ಕಾವೇರಿ ನಗರ ಆಂಜನೇಯ ಗುಡ್ಡ ಪ್ರದೇಶವಾಗಿದ್ದು, ಸ್ಥಳಕ್ಕೆ ಮಾಜಿ ಪಾಲಿಕೆ ಸದಸ್ಯ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು, ಜೀವನ್ ಭೀಮಾ ನಗರದಲ್ಲಿ ಕಂಪೌಂಡ್ ಕುಸಿದಿದೆ. ಆಟೋ ಮೇಲೆಯೇ ಕಂಪೌಂಡ್ ಬಿದ್ದು, ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Kshetra Samachara
18/11/2021 12:00 pm