ವರದಿ: ಗಣೇಶ್ ಹೆಗಡೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಐದು ವರ್ಷದಲ್ಲೇ ಅತ್ಯಧಿಕ ಮಳೆ ಕಳೆದ 15 ದಿನಗಳಲ್ಲಿ ಸುರಿದಿದೆ. ನವೆಂಬರ್ 1ರಿಂದ 15ರ ಅವಧಿಯಲ್ಲಿ 79 ಮಿ.ಮೀ ಮಳೆ ಸುರಿದಿದೆ. 2016ರ ನಂತರದ ನವೆಂಬರ್ ತಿಂಗಳಲ್ಲಿ 32 ಮಿ.ಮೀ ಮಳೆ ಅಷ್ಟೇ ಆಗಿತ್ತು.
ವಾಯುಭಾರ ಕುಸಿತದಿಂದ ಎರಡು ವಾರಗಳಿಂದ ಸಿಲಿಕಾನ್ ಸಿಟಿಯಲ್ಲಿ ವಿಪರೀತ ಮಳೆ ಆಗುತ್ತಿದೆ. ನಿನ್ನೆ ಕೂಡ ರಾತ್ರಿ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಆಗಿದೆ. ಬೆಂಗಳೂರು ದಕ್ಷಿಣ ವಲಯದ ವಿದ್ಯಾಪೀಠದಲ್ಲಿ ಇದೇ ತಿಂಗಳ 5ರಂದು 135 ಮಿ.ಮೀ ಅತ್ಯಧಿಕ ಮಳೆ ಆಗಿದೆ.
ನವೆಂಬರ್ ಈವೆರೆಗೆ ಬಿಬಿಎಂಪಿ ಎಂಟು ವಲಯಗಳಲ್ಲೂ ಭಾರಿ ಮಳೆ ಸುರಿದಿದೆ. ಒಟ್ಟಾರೆ 116 ಮಿ.ಮೀ ಮಳೆ ನಗರದಲ್ಲಿ ಎರಡು ವಾರದಲ್ಲಿ ಸುರಿದ ದಾಖಲೆ ಆಗಿವೆ.
Kshetra Samachara
17/11/2021 08:23 am