ಬೆಂಗಳೂರಿನ ಆ ರಸ್ತೆಯ ಮೇಲೆ ಎಲ್ಲಿ ನೋಡಿದರಲ್ಲಿ ಹಾವುಗಳು ಸತ್ತಿ ಬಿದ್ದಿವೆ.ಹೌದು ಅಲ್ಲಾಳಸಂದ್ರ ಕೆರೆ ರಸ್ತೆಯಲ್ಲಿ ಹಾವುಗಳ ಮಾರಣಹೋಮ ನಡೆದಿದೆ.ಈ ರಸ್ತೆ ಮೇಲೆ ಓಡಾಡುತ್ತಿದ್ದ ವಾಹನ ಸವಾರರು ಹಾವುಗಳು ಸತ್ತು ಬಿದ್ದದ್ದನ್ನು ಕಂಡು ಭಯಭೀತರಾಗಿದ್ದಾರೆ.ನೀರು ಹಾವುಗಳು ಮತ್ತು ನಾಗರಹಾವುಗಳು ರಸ್ತೆಗಳ ಮೇಲೆ ಸತ್ತು ಬಿದ್ದಿರುವುದು ಕಂಡು ಬಂತು.ಇಲ್ಲಿನ ಸ್ಥಳೀಯರ ಪ್ರಕಾರ ಐದೇ ದಿನಗಳಲ್ಲಿ 70 ಹಾವುಗಳು ಸತ್ತಿದೆ.
ಹಾವು ತಜ್ಞರ ಪ್ರಕಾರ ಹಾವುಗಳು ಕಿತ್ತಾಡಿಕೊಂಡು ಸತ್ತಿರಬಹುದು. ಯಾಕೆಂದರೆ ಗಂಡು ಮತ್ತು ಹೆಣ್ಣು ಹಾವುಗಳು ಪರಸ್ಪರ ಸೇರುವಂತಹ ಮಾಸ ಇದಾಗಿದ್ದು ಹೆಣ್ಣು ಹಾವನ್ನು ಪಡೆಯಲು ಗಂಡು ಹಾವುಗಳು ಪರಸ್ಪರ ಕಿತ್ತಾಡಿ ಕೊನೆಯಲ್ಲಿ ಜೀವಂತವಾಗಿ ಉಳಿಯುವಂತಹ ಹಾವುಗೆ ಹೆಣ್ಣು ಹಾವು ಸಿಗುತ್ತದೆ.ಇದು ಕೂಡ ಹಾವುಗಳ ಸಾವಿಗೆ ಒಂದು ಕಾರಣವಾಗಿರಬಹುದು. ಇಲ್ಲವಾದರೆ ಅಲ್ಲಿನ ಸ್ಥಳೀಯ ಕಿಡಿಗೇಡಿಗಳು ಯಾರಾದರೂ ಹಾವುಗಳನ್ನು ಕೊಂದಿರಬಹುದು.
ಕಾರಣ ಏನಾ ಆಗಲಿ, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಹಾವುಗಳ ಜೀವ ಕಾಪಾಡಬೇಕು.ಒಂದು ವೇಳೆ ಕಿಡಿಗೇಡಿಗಳ ಕೈಚಳಕಕ್ಕೆ ಆ ಹಾವುಗಳು ಬಲಿಯಾಗಿದ್ದರೆ, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗಟ್ಟಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
04/06/2022 08:37 pm