ಬೆಂಗಳೂರು: ಇತ್ತೀಚಿಗೆ ಕಾಡು ಪ್ರಾಣಿಗಳು ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬರುವುದು ಮಾಮೂಲಿ ಆಗಿಬಿಟ್ಟಿದೆ ಆದರಲ್ಲೂ ಕೂಡ ಕಾಡಾನೆಗಳಿಗೆ ಸೂಕ್ತ ಆಹಾರ ಸಿಗದೆ ರೈತರ ಜಮೀನಿಗೆ ನುಗ್ಗಿ ದಾಂಧಲೆ ನಡೆಸಿದೆ. ಇದರಿಂದ ಕಂಗಾಲು ಆಗಿದ್ದಾರೆ.
ಇಂದು ಬೆಳಗಿನ ಜಾವ 4:00 ಗಂಟೆ ಸುಮಾರಿಗೆ ಮೂರು ಕಾಡಾನೆಗಳು ಬನ್ನೇರುಘಟ್ಟ ಸಮೀಪದ ಕಾಸಗುಪ್ಪೆ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಇನ್ನು ಕಾಡಾನೆ ಗಳನ್ನ ಕಂಡು ಗ್ರಾಮಸ್ಥರಲ್ಲಿ ಅತಂಕ ಮನೆಮಾಡಿದೆ .ಕಾಡಾನೆ ಕಂಡು ಕಿರುಚಾಡುತಿದ್ದಂತೆ ಕಾಡಿನತ್ತ ಮುಖಮಾಡಿವೆ. ಇನ್ನು ಪದೇ ಪದೇ ಹಳ್ಳಿಗೆ ನುಗ್ಗುತ್ತಿರುವ ಕಾಡಾನೆಹಳಿಂದಾಗಿ ಗ್ರಾಮಸ್ಥರು ನೆಮ್ಮದಿಯಾಗಿ ಓಡಾಡಲು ಆಗುತ್ತಿಲ್ಲ. ಅರಣ್ಯ ಅಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರು ಅವರ ಕಣ್ತಪ್ಪಿಸಿ ಕಾಡಿನಿಂದ ನಾಡಿಗೆ ಬರುತ್ತಿವೆ.. ಇನ್ನು ಕಾಡಾನೆಗಳನ್ನು ಓಡಾಟವನ್ನು ಅಲ್ಲಿನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ..
Kshetra Samachara
28/06/2022 11:45 am