ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಾಯಿಯಿಂದ ಬೇರ್ಪಟ್ಟ ಆನೆ ಮರಿ;ಅನಾಥ ಮರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆ !

ಬೆಂಗಳೂರು ದಕ್ಷಿಣ: ಅನಾಥ ಕಾಡಾನೆ ಮರಿಯನ್ನ ಆನೆ ಗುಂಪಿಗೆ ಸೇರಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ.

ಹೌದು ಇತ್ತೀಚಿಗೆ ಮುತ್ತತ್ತಿ ಕಡೆಗೆ ಹೋಗುವ ದಾರಿಯಲ್ಲಿ ಕಾವೇರಿ ವನ್ಯಜೀವಿ ಅಭಯಾರಣ್ಯದ ಹಲಗೂರು ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆ ಮರಿಯೊಂದು ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಅದನ್ನ ಮತ್ತೆ ಆನೆ ಗುಂಪಿಗೆ ಸೇರಿಸೋ ಪ್ರಯತ್ನವೂ ಆಗಿದೆ.

ಆದರೆ, ಈಗ ಈ ಆನೆ ಮರಿಯನ್ನ ಹೆಚ್ಚಿನ ಆರೈಕೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಲಾಯಿತು.

ಆನೆ ಮರಿಯು 3-4 ತಿಂಗಳ ವಯಸ್ಸು ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮಾವುತರು ಆನೆ ಮರಿಯ ಆರೈಕೆ ಮಾಡುತ್ತಿದ್ದಾರೆ.

ಕನಿಷ್ಠ 6 ತಿಂಗಳಿಂದ 1 ವರ್ಷದವರೆಗೆ ತಾಯಿಯ ಹಾಲು ಇಲ್ಲದ ಮರಿಗಳು ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಅಂತಹ ಮರಿಗಳ ಬದುಕುಳಿಯೋ ಪ್ರಮಾಣವೂ ಕಡಿಮೆಯಾಗಿರುತ್ತದೆ.

ಹೀಗಾಗಿ ಈ ಆನೆ ಮರಿ ವಿಚಾರದಲ್ಲೂ ಮುನ್ನೇಚ್ಚರಿಕೆವಹಿಸಲಾಗಿದ್ದು ಪಶುವೈದ್ಯರು ಮತ್ತು ಮಾವುತರು ಈಗ ತೀವ್ರ ನಿಗಾವಹಿಸುತ್ತಿದ್ದಾರೆ.

Edited By : PublicNext Desk
PublicNext

PublicNext

03/08/2022 04:45 pm

Cinque Terre

21.47 K

Cinque Terre

0

ಸಂಬಂಧಿತ ಸುದ್ದಿ