ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಜನರೇ ಬೀದಿ ನಾಯಿಗಳಿಂದ ಹುಷಾರ್.!

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿ ನಾಯಿಗಳು ಜನರಿಗೆ ಕಚ್ಚಿರುವ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಮಕ್ಕಳ ಮೇಲೆಯೇ ಹೆಚ್ಚು ದಾಳಿ ನಡೆದಿವೆ. ಎರಡು ವರ್ಷಗಳಲ್ಲಿ ಬೆಂಗಳೂರಿನ 52,262 ಜನರ ಮೇಲೆ ಬೀದಿನಾಯಿಗಳು ಅಟ್ಯಾಕ್ ಮಾಡಿದೆ.

ಹೌದು. ಬಿಬಿಎಂಪಿ ಆ ವರದಿಯ ಪ್ರಕಾರ ಎರಡು ವರ್ಷದಲ್ಲಿ 52,262 ಜನ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ.

ಬೈಟ್: ಬಾಲಸುಂದರ್ (ಬಿಬಿಎಂಪಿ, ಆರೋಗ್ಯ ಅಧಿಕಾರಿ)

ಅದರಲ್ಲಿ ತಿಂಗಳಿಗೆ 2,177 ಮಂದಿ ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗಿದ್ದಾರೆ. ಇದಕ್ಕೆಲ್ಲ ಕಾರಣ ಬಿಬಿಎಂಪಿ ಮತ್ತು ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇದರಲ್ಲಿ ದಿನನಿತ್ಯ 70ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ಅಟ್ಟಹಾಸ ನಡೆಯುತ್ತಿದೆ. ಕೂಡಲೇ ಬಿಬಿಎಂಪಿ ಮತ್ತು ಸರ್ಕಾರ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಕಡಿತ ದಿಂದ ಜನರನ್ನು ಪಾರುಮಾಡಬೇಕು. ಮತ್ತು ಬೀದಿನಾಯಿಗಳಿಗೆ ಅನಿಮಲ್ ಬರ್ತ್ ಕಂಟ್ರೋಲ್ (ABC) ಮಾಡಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆ ತಡೆಯಬೇಕು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Somashekar
Kshetra Samachara

Kshetra Samachara

29/07/2022 08:48 pm

Cinque Terre

4.51 K

Cinque Terre

0

ಸಂಬಂಧಿತ ಸುದ್ದಿ