ದೊಡ್ಡಬಳ್ಳಾಪುರ: ಇಂದು ವಿಶ್ವ ಅಮ್ಮಂದಿರ ದಿನ. ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಅನೇಕರು ತಮ್ಮ ತಾಯಂದಿರುಗಳಿಗೆ ಅಭಿಮಾನಿಗಳ ಸುರಿಮಳೆಗೈದಿದ್ದಾರೆ. ಮಾತೃ ವಾತ್ಸಲ್ಯ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣಿ, ಪಕ್ಷಿಗಳಲ್ಲೂ ತಾಯಿ ಪ್ರೇಮ ಕಾಣುತ್ತೇವೆ. ಅದರ ತಾಜಾ ಉದಾಹರಣೆ ದೊಡ್ಡಬಳ್ಳಾಪುರ ಪ್ರವಾಸಿ ಮಂದಿರದಲ್ಲಿ ಕಂಡ ಒಂದು ದೃಶ್ಯ.
ಕೋತಿಗಳ ಹಿಂಡು ಆಹಾರ ಅರಸುತ್ತಾ ಒಂದು ಕಡೇ ಮತ್ತೊಂದು ಕಡೆಗೆ ವಲಸೆ ಹೋಗುತ್ತಿರುತ್ತದೆ. ಕೆಲವು ದಿನಗಳಿಂದ ದೊಡ್ಡಬಳ್ಳಾಪುರ ನಗರದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಗಾಳಿ ಮಳೆಯ ಆರ್ಭಟಕ್ಕೆ ಮರಿ ಕೋತಿ ಸಾವನ್ನಪ್ಪಿದೆ. ಆದರೆ ತಾಯಿ ಕೋತಿಗೆ ತನ್ನ ಮರಿ ಕೋತಿಯ ಸಾವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ತನ್ನ ಮರಿ ಇನ್ನೂ ಜೀವಂತವಾಗಿದೆ ಎಂಬ ಭಾವನೆ ಅದಕ್ಕೆ. ಸತ್ತ ಮರಿಯನ್ನು ತನ್ನ ಜೊತೆಯಲ್ಲಿ ಹೊತ್ತುಕೊಂಡು ಕೋತಿಗಳ ಹಿಂಡುಗಳ ಜೊತೆ ಹೋಗುತ್ತಿದೆ. ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದ ಒಂದು ಮರದಲ್ಲಿ ಕೋತಿಗಳ ಹಿಂಡು ಬಂದಾಗ ಈ ದೃಶ್ಯ ಜನರ ಕಣ್ಣಿಗೆ ಬಿದ್ದಿತು.
PublicNext
08/05/2022 06:25 pm