ಬೆಂಗಳೂರು:ಕರ್ನಾಟಕ ರಾಜ್ಯದಲ್ಲಿ ರೋಯಿಂಗ್ ಅಂದರೆ ಸಾಕು ನಮಗೆ ಸಂಭಂದವಿಲ್ಲ. ಅದು ಯಾವುದೋ ಹೊಸ ಹೆಸರಾಗಿದೆ ಎನ್ನುವ ಜನರು ಇರ್ತಾರೆ. ಆದರೆ ಅದು ಒಂದು ಆಟ ವಾಗಿದ್ದು,ಈ ಆಟದಲ್ಲಿ ನಮ್ಮ ಬೆಂಗಳೂರಿನ ಹುಡುಗಿಯರು
ಭಾರೀ ಸಾಧನೆ ಮಾಡಿದ್ದಾರೆ.
ಹೌದು. ಇದೇ ರೋಯಿಂಗ್ ಆಟದಲ್ಲಿ ನಮ್ಮ ಬೆಂಗಳೂರಿನ ಯುವತಿಯರು ಮಿಂಚಿತ್ತಿದ್ದಾರೆ. ವಿಶೇಷ ಅಂದ್ರೆ, ಒಂದೇ ಕುಟುಂಬದ ಈ ಸಹೋದರಿರು ಹೆಸರು ಕೋಮಲಾ ಮತ್ತು ಮಾನಸ. ಇವರು ಈ ಒಂದು ರೋಯಿಂಗ್ ಆಟದಲ್ಲಿ ಈಗಾಗಲೇ ಸುಮಾರು ಪದಕಗಳನ್ನು ನಮ್ಮ ರಾಜ್ಯಕ್ಕೆ ತಂದು ಕೊಟ್ಟಿದ್ದಾರೆ.
ಹಾಗೆ ತಂಗಿಗೆ ರೋಯಿಂಗ್ ನಲ್ಲಿ ಸ್ಪರ್ಧೆ ಇರುವುದರಿಂದ ನಾನು ಒಬ್ಬ ಸೀನಿಯರ್ ಆಗಿ ನಗರದ ಮಡಿವಾಳ ಕೆರೆಯಲ್ಲಿ ರೋಯಿಂಗ್ ಹೇಳಿಕೊಡಲು ಬಂದಿದ್ದೇನೆ. ನಾನು ಕೂಡ ರಾಜ್ಯಕ್ಕೆ ರೋಯಿಂಗ್ ಪಂದ್ಯದಲ್ಲಿ ಸುಮಾರು ಐದು ಬಾರಿ ಪದಕಗಳನ್ನು ಪಡೆದು ನಮ್ಮ ರಾಜ್ಯಕ್ಕೆ ತಂದಿದ್ದೇನ ಎನ್ನುತ್ತಾರೆ ಮಾನಸ.
ಆದರೆ ನನ್ನ ಸ್ಪರ್ಧೆ ಡಿಸೆಂಬರ್ ನಲ್ಲಿ ಇರುವುದರಿಂದ ನಾನು ನನ್ನ ತಂಗಿಗೆ ಸಾಥ್ ಕೊಟ್ಟಿದ್ದೇನೆ. ಒಟ್ಟಿನಲ್ಲಿ ನಮ್ಮ ಇಬ್ಬರಲ್ಲಿ ರೋಯಿಂಗ್ ಸ್ಪರ್ಧೆಯಲ್ಲಿ ಯಾರೇ ಏನೇ ಗೆದ್ದರು ನಮ್ಮ ಕರ್ನಾಟಕ್ಕೆ ಅದು ಕೀರ್ತಿ. ಇನ್ನೂ ನಮ್ಮ ರಾಜ್ಯ ಸರ್ಕಾರ ಕೂಡ ನಮ್ಮ ರೋಯಿಂಗ್ ಕ್ರೀಡೆಗೆ ಪ್ರೋತ್ಸಾಹ ಕೊಡಬೇಕು ಎನ್ನುವುದು ನಮ್ಮ ಮನವಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
07/06/2022 10:55 pm