ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಂದುವಿಶ್ವ ಪರಿಸರ ದಿನ ಹಿನ್ನೆಲೆ; ವಿದ್ಯಾರ್ಥಿಗಳಿಂದ ಜನ ಜಾಗೃತಿ ಅಭಿಯಾನ

ವರದಿ: ಬಲರಾಮ್ ವಿ.

ಬೆಂಗಳೂರು: ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಕೆಆರ್ ಪುರದ ಜ್ಯೋತಿನಗರ ಪ್ರೀಗೆಟೇಷನ್ ಶಾಲೆ ಮಕ್ಕಳು ಭಿತ್ತಿ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಪರಿಸರದ ಕುರಿತು ಅರಿವು ಮೂಡಿಸಿದರು.

ಮನೆಗೊಂದು ಮರ. ಊರಿಗೊಂದು ವನ, ಹಸಿರೇ ನಮ್ಮ ಉಸಿರು ಎನ್ನುವ ಭಿತ್ತಿ ಚಿತ್ರಗಳನ್ನು ಹಿಡಿದು ಮೇಡಹಳ್ಳಿ, ಪಾರ್ವತಿನಗರ, ವಿನಾಯಕ‌ ನಗರ, ಜ್ಯೋತಿನಗರದಲ್ಲಿ ಪರಿಸರದ ಕುರಿತು ಜನ ಜಾಗೃತಿ ಮೂಡಿಸಿದರು.

ಮುಂದಿನ ದಿನಗಳಲ್ಲಿ ಗಾಳಿಯನ್ನೂ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗದಂತೆ ಈಗಲೇ ಮುಂಜಾಗ್ರತೆ ವಹಿಸಿ ಮನೆಗೊಂದರಂತೆ ಗಿಡ ನೆಡುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಲು ತಿಳಿಸಿದರು. ನಮ್ಮ ಪೂರ್ವಜರು ಅವಿದ್ಯಾವಂತರಾಗಿದ್ದರೂ ಗಿಡಗಳನ್ನು ಬೆಳೆಸಿ ಪ್ರಾಕೃತಿಯ ಮಧ್ಯೆ ಬದುಕುತ್ತಿದ್ದರು ಎಂದರು.

"ಪರಿಸರದ ಮೇಲಿನ ಕಾಳಜಿ ಜೂನ್ ತಿಂಗಳಿಗೆ ಮಾತ್ರ ಸೀಮಿತವಾಗದೇ ಪ್ರತಿದಿನ ಪರಿಸರದ ಬಗ್ಗೆ ಕಾಳಜಿ ವಹಿಸಿ" ಎಂದು ಶಿಕ್ಷಕಿಯರು ಕಿವಿಮಾತು ಹೇಳಿದರು.

Edited By : Manjunath H D
Kshetra Samachara

Kshetra Samachara

05/06/2022 10:08 am

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ