ಆನೇಕಲ್: ಅರಣ್ಯ ಸಂರಕ್ಷಣೆ ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣೆ, ಪ್ರಕೃತಿ ಅಧ್ಯಯನ ಸೇರಿದಂತೆ ಹಲವು ವಿಚಾರಗಳನ್ನು ವಿದ್ಯಾರ್ಥಿಗಳ ಜೊತೆ ಸಮಾಲೋಚಿಸಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಸ್ಕೌಟ್ಸ್ ಅಂಡ್ ಗೈಡ್ಸ್‌ನ ಬೆಂಗಳೂರು ಪೂರ್ವ ಜಿಲ್ಲಾ ಕಾರ್ಯದರ್ಶಿ ನರೇಂದ್ರ ಕುಮಾರ್ ತಿಳಿಸಿದರು.
ಆನೇಕಲ್ ಪಟ್ಟಣದ ಅಕ್ಷರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸ್ಕೌಟ್ಸ್ ಅಂಡ್ ಗೈಡ್ಸ್ ಬೆಂಗಳೂರು ಪೂರ್ವ ತಾಲ್ಲೂಕು ನರೇಂದ್ರ ಕುಮಾರ್, ಆನೇಕಲ್ ನಲ್ಲಿ ಕಳೆದ 4ದಿನಗಳಿಂದ ರಾಜ್ಯಮಟ್ಟದ ರೋವರ್ ರೇಂಜ್ ಪ್ರಕೃತಿ ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿದ್ದರು. (ರೋವರ್ ರೇಂಜ್ ಅಂದರೆ ಕಾಲೇಜು ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್).
ಇನ್ನು ರಾಜ್ಯಮಟ್ಟದ ಶಿಬಿರದಲ್ಲಿ ಕರ್ನಾಟಕದಿಂದ 25 ಜಿಲ್ಲೆಗಳಿಂದ 120 ರೋವರ್ ರೇಂಜ್ ವಿದ್ಯಾರ್ಥಿಗಳು ಆಗಮಿಸಿದ್ದರು. ಈ ನಾಲ್ಕು ದಿನಗಳಲ್ಲಿ ಪ್ರವಾಸಿ ತಾಣಗಳ ಬಗ್ಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಣ್ಯ ಇಲಾಖೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಬನ್ನೇರ್ಘಟ್ಟ ಸುವರ್ಣಮುಖಿ ಜಾಗದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿ ಹೊರಗಡೆ ತಂದು ಪಂಚಾಯಿತಿಗೆ ನೀಡಲಾಯಿತು. ಈ ಕಾರ್ಯಕ್ರಮದ ಉದ್ದಕ್ಕೂ ಪರಿಸರ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಬಗ್ಗೆ ಮನವರಿಕೆಯಾಗಿದೆ ವಿದ್ಯಾರ್ಥಿಗಳ ಸಂತೋಷವಾಗಿ ಭಾಗಿಯಾಗಿದ್ದರು.
Kshetra Samachara
27/02/2022 07:49 pm