ಹೊಸಕೋಟೆ: ಮಳೆ ನಿಂತರೂ ಕೆರೆಕೋಡಿಯ ತಗ್ಗುಪ್ರದೇಶಗಳಲ್ಲಿ ನೀರು ನಿಂತು ಸಾವಿರಾರು ಎಕರೆ ತೋಟದ ಬೆಳೆ ಕೊಳೆತು ನಾಶವಾಗಿದೆ. ಮಳೆ ನಿಂತ್ರು ಕೆರೆಕೋಡಿ ನೀರು ಇನ್ನು ಕಡಿಮೆ ಆಗ್ತಿಲ್ಲ. ಇದರಿಂದ ರೈತ ಬೆಳೆದಿದ್ದ ಬೆಳೆ ತೋಟಗಳಲ್ಲೆ ಗೊಬ್ಬರ ಆಗ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಗಡಿ ಭಾಗದ ದಕ್ಷಿಣ ಪಿನಾಕಿನಿ ನದಿಗೆ ಹೊಂದಿಕೊಂಡ ಮುಗಳೂರು ಬಾಗೂರು, ಗುಂಡೂರು, ತಿರುವರಂಗ, ತತ್ತನೂರು, ಗಣಗಲೂರು, ತಿರುವರಂಗ, ಮಾರನಗೆರೆ ಸಿದ್ಧನಪುರ, ಶಿವನಾಪುರ ರೈತರ ಸಾವಿರಾರು ಎಕರೆ ಬೆಳೆ ನೀರಲ್ಲೆ ಕೊಳೆತೋಗಿದೆ.
ತಗ್ಗು ಪ್ರದೇಶಗಳಲ್ಲಿ ಬಿತ್ತನೆ ಮಾಡಿದ ಬೀನ್ಸ್, ಕ್ಯಾರೇಟ್, ಟೊಮ್ಯಾಟೊ, ಕ್ಯಾಪ್ಸಿಕಮ್, ಕೊತ್ತಂಬರಿ, ನವಿಲು ಕೋಸ್ ಬೆಳೆ ಇಲ್ಲವಾಗಿವೆ.
ಇದರಿಂದ ರೈತ ಲಕ್ಷಾಂತರ ಲಾಸ್ ಮಾಡ್ಕೊಂಡು ಕಂಗಾಲಾಗಿದ್ದಾನೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರದ ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ಲಕ್ಷಾಂತರ ಎಕರೆ ಬೆಳೆ ಅತಿಯಾದ ಮಳೆಗೆ ನಾಶವಾಗಿದೆ. ಇದರಿಂದ ಈ ಭಾಗದ ರೈತ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಪರಿತಪಿಸುತ್ತಿದ್ದಾನೆ. ಇದರಿಂದ ಸರ್ಕಾರ ಸಮೀಕ್ಷೆ ನಡೆಸಿ ಬೆಳೆನಾಶಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಅನ್ನಧಾತನಿಗೆ ಆಸರೆಯಾಗಬೇಕಿದೆ.
PublicNext
12/09/2022 10:26 pm