ದೊಡ್ಡಬಳ್ಳಾಪುರ : ಬಿರುಗಾಳಿ ಸಹಿತ ಸುರಿದ ಮಳೆಗೆ ಬಾಳೆತೋಟ ನೆಲಕ್ಕುರುಳಿರುವ ಘಟನೆ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿರುಗಾಳಿ ಹೊಡೆತಕ್ಕೆ ರೈತ ಮಂಜುನಾಥ್ ಎಂಬುವವರಿಗೆ ಸೇರಿದ ಸುಮಾರು 200ಕ್ಕೂ ಹೆಚ್ಚು ಬಾಳೆ ಗಿಡಗಳು ಮುರಿದು ಬಿದ್ದಿದೆ.
ಅನಿರೀಕ್ಷಿತ ಗಾಳಿ ಮಳೆಗೆ ಕೈಗೆ ಬಂದ ಫಸಲು ನೆಲಕಚ್ಚಿದೆ. ಇದರಿಂದ ದಿಕ್ಕೇ ತೋಚದಂತಾಗಿದೆ ರೈತನ ಸ್ಥಿತಿ. ಸರ್ಕಾರ ಏನಾದರೂ ಕಿಂಚಿತ್ತು ಪರಿಹಾರ ನೀಡಿದರೆ ಮಾಡಿರುವ ಸಾಲ ತೀರಿಸಿ ಗಂಜಿಯಾದರೂ ಸೇವಿಸಿ ಬದುಕು ದೂಡುತ್ತೇವೆ ಎಂದು ಮಂಜುನಾಥ್ ಮತ್ತು ಅವರ ತಂದೆ ಜಯಣ್ಣ ತಮ್ಮ ಅಳಲು ತೋಡಿಕೊಂಡರು.
Kshetra Samachara
30/04/2022 12:55 pm