ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿರುಗಾಳಿಗೆ ಮರದಕೊಂಬೆ ಬಿದ್ದು ಹೊಸಕಾರು ಜಖಂ: ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಹೊಸಕೋಟೆ: ಇಂದು ಶನಿವಾರ ಬೆಳಗ್ಗೆ 7ಗಂಟೆ ಸುಮಾರಿಗೆ ಜೋರಾಗಿ ಬೀಸಿದ ಗಾಳಿಯ ಪರಿಣಾಮ ರಾಗಿಮರದ ಕೊಂಬೆ ಬಿದ್ದು ಹೊಸ ಕಾರು ಜಖಂ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೋಧನಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗ್ರಾಮದ ಆನಂದ್ ಎನ್ನುವವರು ಜೀವನೋಪಾಯಕ್ಕಾಗಿ ಹೊಸ ಮಾರುತಿ ಕಾರು ಖರೀದಿಸಿದ್ದರು. ಟ್ಯಾಕ್ಸಿ ರೀತಿ ಓಡಿಸಿ ಬದುಕು ಕಟ್ಟಿಕೊಳ್ಳಬೇಕೆಂಬ ಇವರ ಆಸೆಗೆ ಮರದ ಕೊಂಬೆ ತಣ್ಣೀರೆರೆಚಿದೆ. 100 ವರ್ಷಕ್ಕು ಹಿರಿಯದಾದ ಬೃಹತ್ ರಾಗಿ ಮರದ ಕೊಂಬೆ ಬಿದ್ದು ಇನ್ನು ರಿಜಿಸ್ಟ್ರೇಷನ್ ಸಹ ಆಗದ ಕಾರು ಜಖಂ ಆಗಿದ್ದು, ಆನಂದ್ ಕುಟುಂಬಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಅದೃಷ್ಟವಶಾತ್ ಯಾರ ಮನೆ ಮೇಲೆ ಅಥವಾ ಜನರ ಮೇಲೆ ಬೀಳದೆ ರಸ್ತೆಮತ್ತು ಕಾರಿನ ಮೇಲೆ ಬಿದ್ದಿದೆ. ಮನೆ ಮತ್ತು ಜನರ ಮೇಲೆ ಬಿದ್ದಿದ್ದರೆ ಭಾರಿ ಅಪಾಯ ಆಗ್ತಿತ್ತು ಎನ್ನುತ್ತಿದ್ದಾರೆ ಬೋಧನಹೊಸಹಳ್ಳಿ ಜನ. ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagaraj Tulugeri
Kshetra Samachara

Kshetra Samachara

13/08/2022 12:50 pm

Cinque Terre

2.92 K

Cinque Terre

0

ಸಂಬಂಧಿತ ಸುದ್ದಿ