ಬೆಂಗಳೂರು: ನಗರದಲ್ಲಿ ಸುರಿದ ಮಳೆಯಿಂದಾಗಿ ಸ್ವಲ್ಪದರಲ್ಲಿಯೇ ಯುವಕ ಸೇಫ್ ಆಗಿದಾನೆ. ಮಳೆ ನೀರಿಗೆ ತೇಲಿಹೋಗುತ್ತಿದ್ದ ಚೇರ್ ಹಿಡಿಯಲು ಬಾಲಕ ಹೋಗಿದ. ಆಗ ನೆರೆ ಮನೆಯ ಯುವಕನ ಮುಂಜಾಗ್ರತೆಯಿಂದ ಬಾರಿ ಅವಘಡ ತಪ್ಪಿದೆ. ಹೇಗೋ ಮತ್ತೊಬ್ಬ ವ್ಯಕ್ತಿ ಬಾಲಕನನ್ನ ರಕ್ಷಣೆ ಮಾಡಿದ್ದಾನೆ.
ಇನ್ನು ಮೋರಿ ಬ್ಲಾಕ್ ಆಗಿ ಚರಂಡಿ ನೀರು ಹರಿಯುತ್ತಿತ್ತು.ರಾತ್ರಿಯೆಲ್ಲ ಕರೆಂಟ್ ಬೇರೆ ಇಲ್ಲದೆ ಕೆಳಗಿಳಿಯಲು ಆಗದೇ ಜನರು ಪರದಾಟ ನಡೆಸಿದರು.ಗೃಹಪ್ರವೇಶ ಸಂಭ್ರಮ ಕೂಡ ಇತ್ತು ಆ ಸಂಭ್ರಮವನ್ನ ಕೂಡ ಮಳೆ ಕಸಿದಿದೆ.
ನಿನ್ನೆ ರಾತ್ರಿಸುರಿದ ಮಳೆಗೆ ಗೃಹಪ್ರವೇಶ ಸಂಭ್ರಮದಲ್ಲಿದ್ದವರಲ್ಲಿ ನೀರವ ಮೌನ ಆವರಿಸಿತ್ತು.ರಸ್ತೆಯಲ್ಲಿಯೇ ಆರು ಅಡಿಗಿಂತಲೂ ಹೆಚ್ಚು ಮಳೆ ನೀರು ನಿಂತಿದ್ದರಿಂದ ಒಂದು ಕಡೆ ಪೆಂಡಾಲ್ ಹಾಳಾಗಿತ್ತು. ಮತ್ತೊಂದು ಕಡೆ ಅಡುಗೆ ಸಾಮಾಗ್ರಿಗಳು ಮಳೆ ನೀರಿನಿಂದ ಹಾನಿಯಾಗಿತ್ತು. ಯಲಚೇನಹಳ್ಳಿ ಕನಕನಗರ ಏರಿಯಾದಲ್ಲಿ ಈ ಘಟನೆ ನಡೆದಿದೆ. ಇನ್ನು ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಕಾರು ಸ್ಟಾರ್ಟ್ ಆಗದೆ ಕೂಡ ಹಾಳಾಗಿತ್ತು
Kshetra Samachara
31/07/2022 03:34 pm