ಸಿಲಿಕಾನ್ ಸಿಟಿಯಲ್ಲಿ ಈ ನಡುವೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡಬೇಕಾದ್ರೆ ಕುಸಿದು ಬಿದ್ದು, ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಹಿನ್ನಲೆ ಆಸ್ಪತ್ರೆಯಲ್ಲು ವೈದ್ಯರು ಸಹ ಯಾವ ಕಾರಣಕ್ಕೆ ಹೃದಯಘಾತವಾಗ್ತಿದೆ ಎಂದು ತಿಳಿಸಿಲ್ಲ.
ಆದ್ರೆ ಸಾರ್ವಜನಿಕರ ಮನಸ್ಸಲ್ಲಿ ಮಾತ್ರ ಜಿಮ್‌ಗೆ ಹೋಗಿ ಜಾಸ್ತಿ ವರ್ಕೌಟ್ ಮಾಡಿದ್ರೆ ಹಾರ್ಟ್ ಗೆ ಹೆಚ್ಚು ತೊಂದರೆಯಾಗುತ್ತೆ ಅಂದುಕೊಂಡಿದ್ದಾರೆ. ಈ ತರ ಜನರ ಮನಸ್ಸಲ್ಲಿ ಬರಲು ಕಾರಣ ಏನಂದ್ರೆ, ಈ ಸ್ವಲ್ಪ ದಿನಗಳಿಂದ ಈ ತರ ಪ್ರಕರಣಗಳು ದಾಖಲಾಗುತ್ತಿವೆ. ಇವು ಜನರ ಮನಸ್ಸಲ್ಲಿ ಉಳಿಯುತ್ತಿವೆ. ಉದಾಹರಣೆ ನಿನ್ನೆ ತಾನೆ ಸಿಎಂ ಅವರ ಮಾಧ್ಯಮ ಸಂಯೋಜಕರು ಜಿಮ್‌ಗೆ ಹೋಗಿ ವರ್ಕೌಟ್ ಮಾಡಬೇಕಾದ್ರೆ ಮೃತಪಟ್ಟಿದ್ರು.
ಆದ್ರೆ ಈ ಬಗ್ಗೆ ನಿಜಕ್ಕೂ ಜಿಮ್ ಕೋಚರ್‌ಗಳು ಹೇಳುವುದೇ ಬೇರೆ. ಜಿಮ್ ಹೋಗಬೇಕಾದ್ರೆ ಏನ್ ಮಾಡಬೇಕು. ನಂತರ ಯಾವ ಕ್ರಮವನ್ನ ಪಾಲಿಸಬೇಕು ಎಂಬರ ಬಗ್ಗೆ ಸಂಪೂರ್ಣವಾಗಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ್ದಾರೆ ಕೇಳೋಣ ಬನ್ನಿ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
23/08/2022 08:47 pm