ಬೆಂಗಳೂರು: ಬಿಟಿಎಂ ಲೇಔಟ್ NS ಪಾಳ್ಯ ಜಾತ್ರೆಯಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಲೇಔಟ್ ನ ಗಲ್ಲಿಗಲ್ಲಿಗಳಲ್ಲೂ ಮೆರವಣಿಗೆ ಮಾಡಿ ಗೌರವ ಸಮರ್ಪಿಸಲಾಯಿತು.
ಮೆರವಣಿಗೆಯಲ್ಲಿ ತಮ್ಮ ನೆಚ್ಚಿನ ನಟನ ಹಾಡುಗಳನ್ನು ಹಾಕಿ ಅಭಿಮಾನಿಗಳು, ಸಾರ್ವಜನಿಕರು ಕುಣಿದು ಕುಪ್ಪಳಿಸಿದರು. NS ಪಾಳ್ಯದ ಊರಿನ ಜನರಿಂದಲೇ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಾತ್ರೋತ್ಸವದ ಅಲ್ಲಲ್ಲಿ ಅಪ್ಪು ಅವರ ಕಟೌಟ್ ಗಳು ರಾರಾಜಿಸುತ್ತಿತ್ತು.
PublicNext
23/04/2022 03:14 pm