ಬೆಂಗಳೂರು: ಚಾಮರಾಜಪೇಟೆಯಲ್ಲಿ ಮೂರು ತಿಂಗಳಿಂದಲೂ ಹೋರಾಟ ಮಾಡ್ಕೊಂಡು ಬರ್ತಿದ್ದೀವಿ. ಸರ್ಕಾರ ಅವಕಾಶ ಕೊಟ್ಟಿತ್ತು. ಆದ್ರೆ, ವಕ್ಫ್ ಬೋರ್ಡ್ ಸುಪ್ರಿಂ ಕೋರ್ಟಿಗೆ ಹೋಗಿದ್ದಾರೆ. ಯಥಾಸ್ಥಿತಿ ಇರಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ ಎಂದು ನಾಗರಿಕ ಒಕ್ಕೂಟದ ರಾಮೇಗೌಡ ಹೇಳಿದ್ದಾರೆ.
ಇನ್ನು, ಒಂದು ಧರ್ಮದ ಜಾಗದಲ್ಲಿ ಮತ್ತೊಬ್ಬರು ಹೋಗಬಾರದು ಅಂತ ಕೋಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆ ಬಾಗ್ತೀವಿ. ನ್ಯಾಯಾಲಯ ಹೇಳಿದ್ಮೇಲೆ ನಾವೆಲ್ಲರೂ ಪಾಲನೆ ಮಾಡಬೇಕು. ಬೇರೆ ಕಡೆ ನಾವು ಗಣೇಶೋತ್ಸವ ಮಾಡಲ್ಲ. ಮಾಡಿದ್ರೇ ಅದು ಚಾಮರಾಜಪೇಟೆ ಮೈದಾನದಲ್ಲಿ ಮಾತ್ರ. ಸರ್ಕಾರ, ಬಿಬಿಎಂಪಿ ಯಾರೂ ಬರೆದಿದ್ರೂ ನಾಗರಿಕರ ಒಕ್ಕೂಟ ಹೋರಾಟ ಮಾಡುತ್ತೆ ಎಂದು ರಾಮೇಗೌಡ ಹೇಳಿದರು.
PublicNext
30/08/2022 09:24 pm