ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಡವರ ಹಂಚಿಕೆಗೆ ಮೀಸಲಿಟ್ಟ ಜಾಗದಲ್ಲಿ ವಾಸವಿದ್ದ ಮನೆ ತೆರವುಗೊಳಿಸಿದ ಅಧಿಕಾರಿಗಳು

ಯಲಹಂಕ:- ಬೆಂಗಳೂರು ನಗರ ಜಿಲ್ಲೆ‌ ಯಲಹಂಕ ತಾಲೂಕಿನ‌ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಅದ್ದಿಗಾನಹಳ್ಳಿ ಗ್ರಾಮದ ಸ.ನಂ 70ರಲ್ಲಿ ಸರ್ಕಾರಿ ಜಮೀನಿದೆ. ಈ ಸರ್ಕಾರಿ ಜಮೀನಿನಲ್ಲಿ ಹತ್ತಕ್ಕು ಹೆಚ್ಚು ಜನ ಬಡವರಿಗೆ, ದೀನ ದಲಿತರಿಗೆ 94C ಅಡಿ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಿಸಲಾಗಿದೆ. ಹತ್ತು ವರ್ಷಗಳಿಂದ ಇದೇ ಸರ್ಕಾರಿ ಜಾಗದಲ್ಲಿ ಅದ್ದಿಗಾನಹಳ್ಳಿ ಹೇಮಂತ್ ಶೀಟ್ ಮನೆಕಟ್ಟಿಕೊಂಡು ವಾಸವಿದ್ದರು. ಬಡವರಿಗೆ ಆಶ್ರಯವಿಲ್ಲ ವಾಸವಿದ್ದ ಸ್ಥಳ ನಿವೇಶನದ ಹಕ್ಕುಪತ್ರಕ್ಕಾಗಿ ಯಲಹಂಕ ಶಾಸಕ ವಿಶ್ವನಾಥ್ ರವರಿಗೂ ಡಿಎಎಸ್‌ಎಸ್ ಸಂಘಟನೆ ಮೂಲಕ ಹೇಮಂತ್ ಮನವಿ ಮಾಡಿದ್ದರು. ಆದರೀಗ ಯಲಹಂಕ ಕಂದಾಯ ಅಧಿಕಾರಿಗಳು ಏಕಾಏಕಿ ಶೀಟ್ ಮನೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ ಎಂದು ಹೇಮಂತ್ ಅಳಲು ತೋಡಿಕೊಂಡಿದ್ದಾರೆ.

ಅದ್ದಿಗಾನಹಳ್ಳಿ ಗ್ರಾಮದ ಬಡ ಕೂಲಿಕಾರ್ಮಿಕರಾದ ಹೇಮಂತ್ ಕುಮಾರ್, ಅರ್ಜುನ್, ಪುನೀತ್, ರಾಜಣ್ಣ, ನರಸಪ್ಪ & ನಾಗರಾಜ್ ಎಂಬುವವರು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ರಿಗೆ 94C ಅಡಿ ಆಶ್ರಯ ಯೋಜನೆ ಅಡಿ ನಿವೇಶನ ನೀಡುವಂತೆ ಕೋರಿ ಮನವಿ ಮಾಡಿದ್ದರು. ಶಾಸಕರು ಸಹ ಸರ್ಕಾರಕ್ಕೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಶಿಫಾರಸ್ಸು ಸಹ ಮಾಡಿದ್ದಾರೆ. ಆದರೆ ಯಲಹಂಕ ತಾಲೂಕಿನ‌ ಕಂದಾಯ ಅಧಿಕಾರಿಗಳು, ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಮತ್ತು ಉಪ ತಹಶೀಲ್ದಾರರ ಮೂಲಕ ಮನೆ ದ್ವಂಸಗೊಳಿಸಲಾಗಿದೆ. ಬಡವರ ಸ್ಥಿತಿಗೆ ದಲಿತ ಸಂಘರ್ಷ ಸಮಿತಿ ಮರುಗಿದೆ. 94C ಅಡಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ದಲಿತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಇತ್ತ ಕಂದಾಯ ಅಧಿಕಾರಿಗಳು ಸರ್ಕಾರದ ಜಾಗದಲ್ಲಿ ಅನಧಿಕೃತ ಮನೆ ನಿರ್ಮಿಸಿದ್ದರು, ಅದಕ್ಕೆ ತೆರವುಗೊಳಿಸಿದ್ದೇವೆ ಅಂತಾರೆ. ಇತ್ತ ಹೇಮಂತ್ 94C ಅಡಿ ನಿವೇಶನ ಹಂಚಿಕೆಗೆ ಅರ್ಜಿ ಸಲ್ಲಿಸಿದ್ದರು ನೋಟೀಸ್ ನೀಡದೆ ಮನೆ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಬಂಧಪಟ್ಟವರು ಬಡವರಿಗೆ ಅನ್ಯಾಯ ಆಗದಂತೆ ಮತ್ತು ಕಾನೂನಿನ ಅಡಿ ಸೂಕ್ತ‌ಕಮ ಜರುಗಿಸಲಿ.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್, ಯಲಹಂಕ ಬೆಂಗಳೂರು

Edited By : Shivu K
PublicNext

PublicNext

22/08/2022 08:11 am

Cinque Terre

37.92 K

Cinque Terre

0

ಸಂಬಂಧಿತ ಸುದ್ದಿ