ಬೆಂಗಳೂರು: ಚಾಮರಾಜಪೇಟೆಯಲ್ಲಿ ಈಗಾಗಲೇ ಪಥಸಂಚಲನ ಆರಂಭಿಸಿದೀವಿ. ನಾಲ್ಕು ಕೆ ಎಸ್ ಆರ್‌ಪಿಯ ಸಿಬ್ಬಂದಿ ಹಾಗೂ ಪೊಲೀಸರು ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. ಸುಮಾರು ಆರನೂರಕ್ಕೂ ಅಧಿಕ ಪೊಲೀಸರು ಇವತ್ತು ಪಥಸಂಚಲನ ಮಾಡ್ತಿದ್ದಾರೆ. ಯಾರು ದುಷ್ಕೃತ್ಯ ಮಾಡ್ಬೇಕು ಅಂತಿದ್ದಾರೋ ಎಚ್ಚರಿಕೆ ಸಂದೇಶ ರವಾನೆಮಾಡಲಾಗಿದೆ. ಯಾವುದೇ ಗಲಾಟೆ ಇಲ್ಲದ ರೀತಿಯಲ್ಲಿ ಧ್ವಜಾರೋಹಣ ಮಾಡ್ಬೇಕು ಎಂದು ನಿರ್ಧಾರಿಸಲಾಗಿದೆ. ಹಾಗಾಗಿ ಯಾವುದೇ ರೀತಿಯ ಗಲಭೆಗೆ ಆಸ್ಪದ ಇಲ್ಲ ಎಂದು ಚಾಮರಾಜಪೇಟೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಧ್ವಜಾರೋಹಣ ಮಾಡಲಾಗುತ್ತೆ. ಯಾರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇದ್ಯೋ ಅವರಿಗೆ ಮಾತ್ರ ಅವಕಾಶ ನೀಡಲಾಗುತ್ರೆ. ಇಡೀ ಚಾಮರಾಜಪೇಟೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿನಿತ್ಯವೂ ಪೊಲೀಸರು ಗಸ್ತಿನಲ್ಲಿರ್ತಾರೆ. ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ಚಾಮರಾಜಪೇಟೆ ನಿಗಾವಹಿಸಲಾಗಿದೆ.
PublicNext
12/08/2022 12:26 pm