ಬೆಂಗಳೂರು: ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿರೋದು ನನಗೆ ಬಹಳ ಸಂತೋಷ ತಂದಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಇದು ಉತ್ತಮವಾದ ನಿರ್ಧಾರ. ಆದರೆ, ಲೋಕಾಯುಕ್ತಕ್ಕೆ ಅಧಿಕಾರವನ್ನು ನೀಡಬೇಕು.
ಜೊತೆಗೆ ಉತ್ತಮ ಅಧಿಕಾರಿಗಳನ್ನು ಕೂಡ ನೇಮಿಸಬೇಕು. ಅಧಿಕಾರಿಗಳ ನೇಮಕದಲ್ಲೂ ಕೂಡ ಸರ್ಕಾರ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡದೆ ಲೋಕಾಯುಕ್ತರೇ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು.
ಲೋಕಾಯುಕ್ತಕ್ಕೆ ಕೇವಲ ಅಧಿಕಾರ ನೀಡೋದಲ್ಲದೆ,
ಅದಕ್ಕೆ ಬೇಕಾದ ಸೌಲಭ್ಯ ನೀಡಬೇಕು.
ಲೋಕಾಯುಕ್ತರು ಕೂಡ ಕೊಟ್ಟ ಜವಾಬ್ದಾರಿ ಚೆನ್ನಾಗಿ ನಿರ್ವಹಿಸಬೇಕು. ಎಲ್ಲ ಅಧಿಕಾರ- ಸೌಲಭ್ಯವನ್ನು ಕೊಟ್ಟ ನಂತರ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದ್ರೇ ನಾನೇ ವಿರೋಧ ಮಾಡುತ್ತೇನೆ. ಎಂದು ಪ್ರತಿಕ್ರಿಯಿಸಿದ್ದಾರೆ.
PublicNext
11/08/2022 07:10 pm