ಬೆಂಗಳೂರು: ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬೆಳವಣಿಗೆಗಳು ಆಗುತ್ತಿದ್ದು, ಈಗ ಪೊಲೀಸ್ ಆಯುಕ್ತರು ಕೂಡ ಭದ್ರತೆಯ ಹಿತದೃಷ್ಟಿಯಿಂದ ರೆವಿನ್ಯೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಈದ್ಗಾ ಮೈದಾನ ಈಗ ಕಂದಾಯ ಇಲಾಖೆಗೆ ಸೇರಿದ್ದು ಎಂಬ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಕಾರ್ಯಕ್ರಮಗಳನ್ನ ನಡೆಸುವುದರ ಬಗ್ಗೆ ಕೂಡ ರೆವಿನ್ಯೂ ಇಲಾಖೆ ನಿರ್ಧಾರ ತೆಗೆದುಕೊಳ್ಳಲಿದೆ. ಹೀಗಾಗಿ ಅವರು ಯಾವ ರೀತಿ ನಿರ್ಧಾರ ತೆಗೆದುಕೊಳ್ತಾರೋ ಅದರ ಮೇಲೆ ಪೊಲೀಸ್ ಇಲಾಖೆಯ ಸಹಕಾರ ನೀಡ್ತೀವಿ ಎಂದಿದ್ದಾರೆ.
ಇನ್ನು ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವದ ಮೆರವಣಿಗೆ ಬಗ್ಗೆ ಮಾತನಾಡಿದ ಕಮಿಷನರ್, ದೇಶದ ಸಂಭ್ರಮಾಚರಣೆ ವಿಚಾರಕ್ಕೆ ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಅದು ದೇಶದ ಹಬ್ಬ. ಆದರೂ ನಾವು ಭದ್ರತಾ ಹಿತ ದೃಷ್ಟಿಯಿಂದ ಪೊಲೀಸರನ್ನ ನಿಯೋಜನೆ ಮಾಡ್ತೀವಿ ಎಂದಿದ್ದಾರೆ.
PublicNext
09/08/2022 06:56 pm