ಬಿಬಿಎಂಪಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ನಡೆಯಲಿರುವ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ (ಹರ್ ಘರ್ ತಿರಂಗಾ)” ಅಭಿಯಾನಕ್ಕಾಗಿ ಪಾಲಿಕೆಯು 10 ಲಕ್ಷ ರಾಷ್ಟ್ರಧ್ವಜಗಳನ್ನು ನಾಗರಿಕರಿಗೆ ವಿತರಿಸಲು ಸಜ್ಜಾಗಿದೆ.
ನಗರದಲ್ಲಿ ಈಗಾಗಲೇ ರಾಷ್ಟ್ರಧ್ವಜ ಹಂಚಿಕೆಯನ್ನು ಬಿಬಿಎಂಪಿಯ ಎಲ್ಲಾ ವಲಯದ ಜಂಟಿ ಆಯುಕ್ತರು ಪ್ರಮುಖ ಜನನಿ ಬಿಡ ಪ್ರದೇಶಗಳು, ಪ್ರಮುಖ ಮಾಲ್‌ಗಳು, ಕಛೇರಿಗಳು, ಇತರೆ ಸ್ಥಳಗಳಲ್ಲಿ ರಾಷ್ಟ್ರ ಧ್ವಜಗಳನ್ನು ವಿತರಿಸುತ್ತಿದ್ದು, ನಾಗರಿಕರು ಉತ್ಸಾಹದಿಂದ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಸರಿಯಾಗಿರುವ ರಾಷ್ಟ್ರ ಧ್ವಜಗಳನ್ನು ಮಾರಟ ಮಾಡಲು ಸೂಚನೆ ನೀಡಲಾಗಿದೆ.
ಭಾರತದ ಧ್ವಜ ಸಂಹಿತೆಯ ಪ್ರಕಾರ, ಧ್ವಜದ ಆಕಾರ, ಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವು ಸಮಾನ ಗಾತ್ರ ಹಾಗೂ ಅಶೋಕ ಚಕ್ರವು ಮಧ್ಯಭಾಗದಲ್ಲಿರಬೇಕು. ಸರಿಯಾಗಿ ಇಲ್ಲದ ರಾಷ್ಟ್ರ ಧ್ವಜಗಳಲ್ಲಿ ಅಳತೆ ವ್ಯತ್ಯಾಸಗಳು, ಅಶೋಕ ಚಕ್ರ ಮಧ್ಯಭಾಗದಲ್ಲಿರದೇ ಇರುವುದು, ಸ್ವಿಚಿಂಗ್ ಸರಿಯಾಗಿ ಇಲ್ಲದಿರುವುದು ಇದ್ದಲ್ಲಿ ಅಂತಹ ರಾಷ್ಟ್ರ ಧ್ವಜಗಳನ್ನು ನಾಗರಿಕರಿಗೆ ನೀಡದಿರಲು ಈಗಾಗಲೇ ಸ್ಪಷ್ಟ ಆದೇಶ ನೀಡಲಾಗಿದೆ. ಇನ್ನು ಬಿಬಿಎಂಪಿ ಆದೇಶ ಪಾಲನೆ ಮಾಡಲು ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
Kshetra Samachara
06/08/2022 04:22 pm