ಬೆಂಗಳೂರು: ಪಿಎಸ್ ಐ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಆಪ್ತರ ಮನೆಗಳ ಸಿಐಡಿ ದಾಳಿ ನಡೆಸಿದೆ.ಜಕ್ಕೂರಿನ ಶಂಬುಲಿಂಗ ಹಾಗೂ ಬೊಮ್ಮಸಂದ್ರದ ಹೂಸ್ಕೂರ್ ನಿವಾಸಿ ಆನಂದ್ ಎಂಬುವರ ಮನೆಗಳ ಮೇಲೆ ಸಿಐಡಿ ತನಿಖಾಧಿಕಾರಿಗಳು ದಾಳಿ ನಡೆಸಿದೆ. ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪತ್ರಗಳನ್ನ ದೊರೆತಿದ್ದು ಜಪ್ತಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಕ್ಕೂರಿನ ಶಂಭುಲಿಂಗ ರಾಯಚೂರು ಮೂಲದ ಎಎಸ್ ಐ ಮಗನಾಗಿದ್ದು ಬೆಂಗಳೂರಿಗೆ ಬಂದು ಕೇವಲ 10 ವರ್ಷವಾಗಿದೆ. ಈತ ಜಕ್ಕೂರಿನಲ್ಲಿ 6 ಕೋಟಿ ಮೌಲ್ಯದ ಫ್ಲ್ಯಾಟ್ ಹಾಗೂ 15 ಕೋಟಿಗೂ ಅಧಿಕ ಲ್ಯಾಂಡ್ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.
ಕೊಡಿಗೆಹಳ್ಳಿಯಲ್ಲಿ ಕೃಷಿ ಉತ್ಪನ್ನಗಳ ಅಂಗಡಿ ಇಟ್ಟುಕೊಂಡಿದ್ದಾನೆ. ಎಡಿಜಿಪಿ ಅಮೃತ್ ಪೌಲ್ ಅವರ ಬೇನಾಮಿಯಾಗಿದ್ದ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನು ಹುಸ್ಕೂರು ಆನಂದನೂ ಕೂಡ ಪೌಲ್ ಜೊತೆ ಸೇರಿ ಕೋಟಿ ಕೋಟಿ ಕೊಳ್ಳೆಹೊಡೆದಿದ್ದಾನೆ ಎನ್ನಲಾಗಿದೆ.
ಹುಸ್ಕೂರು, ಬೊಮ್ಮಸಂದ್ರ,ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹುಸ್ಕೂರು ಆನಂದ ಕೋಟ್ಯಂತರ ರೂಪಾಯಿ ಮೌಲ್ಯದ ಪ್ರಾಪರ್ಟಿ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ.
PublicNext
03/08/2022 12:38 pm