ವರದಿ: ಗೀತಾಂಜಲಿ
ಬೆಂಗಳೂರು: ರಾಜಧಾನಿಯ ಹೃದಯ ಭಾಗದ ರಾಜಾಜಿನಗರದಲ್ಲಿರುವ ಮೋದಿ ಕಣ್ಣಿನ ಆಸ್ಪತ್ರೆ ಈಗ ವ್ಯಾಪಕ ಸುದ್ದಿಯಲ್ಲಿದೆ.ಮೋದಿ ಕಣ್ಣಿನ ಆಸ್ಪತ್ರೆ ಯಾರಿಗೆ ಸೇರಬೇಕೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಕಿಶೋರ್ ಮಾನೆ ಮತ್ತು ಮೋದಿ ಸಂಬಂಧಿ ಸುಭಾಷ್ ಮೋದಿ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದೆ. ಇಷ್ಟು ದಿನ ಇಲ್ಲದ ವಿವಾದ ಈಗ ಶುರುವಾಗಿದ್ದು, ಈ ಮೋದಿ ಆಸ್ಪತ್ರೆಯನ್ನ ಪದ್ಮಭೂಷಣ ಡಾ.ಎಂ ಸಿ ಮೋದಿ ಕಟ್ಟಿಬೆಳೆಸಿದ್ರು.
ಅವರ ಮಗ ಅಮರನಾಥ್ ಮೋದಿಗೆ ಮಕ್ಕಳಿಲ್ಲ.ಅವರು ಮತ್ತು ಅವರ ಹೆಂಡತಿ ಈ ಆಸ್ಪತ್ರೆಯನ್ನ ನೋಡಿಕೊಳ್ತಿದ್ರು.ಆದ್ರೆ ಈಗ ಆಸ್ಪತ್ರೆಗೆ ಯಾರು ವಾರಸುದಾರರು ಇಲ್ಲ.ಆಸ್ಪತ್ರೆಗೆ ಟ್ರಸ್ಟಿಯಾಗಿ ಸುಭಾಷ್ ಮೋದಿಯವರನ್ನ ಆಗ ನೇಮಕ ಮಾಡಿಕೊಳ್ತಾರೆ. ಆದ್ರೆ ಕಾರಣಾಂತರಗಳಿಂದ ಸುಭಾಷ್ ಮೋದಿನ್ನ ಕೆಲಸದಿಂದ ತೆಗೆದುಹಾಕ್ತಾರೆ. ಆದ್ರೆ ಒಳ ಮರ್ಮ ಏನಿದೆಯೋ ? ಅಂದೇ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಕಿಶೋರ್ ಮಾನೆಯನ್ನ ನೇಮಕ ಮಾಡ್ತಾರೆ.ಆಸ್ಪತ್ರೆಗೆ ಟ್ರಸ್ಟಿ ಅಂತಾ ಯಾರು ಇರುವುದಿಲ್ಲ. ಆದರೂ ಮೋದಿ ಆಸ್ಪತ್ರೆ ಸುಸೂತ್ರವಾಗಿ ನಡೆದುಕೊಂಡು ಹೋಗಿತ್ತು.
ಆದ್ರೆ ಇಷ್ಟು ದಿನ ಇಲ್ಲದ ವಿವಾದ ಈಗ ಏಕಾಏಕಿ ಶುರುವಾಗಿದೆ. ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಆಸ್ಪತ್ರೆಯ ಮೋದಿ ಸಂಬಂಧಿ ಸುಭಾಷ್ ಮೋದಿಯ ನಡುವೆ ವಾದ-ವಿವಾದ ನಡೆಯುತ್ತಿದೆ. ಈ ವಿವಾದ ಈಗ ಹೈಕೋರ್ಟ್ ಮೆಟ್ಟಿಲೇರಿದೆ.ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮೋದಿ ಆಸ್ಪತ್ರೆಗೆ ಸಂಬಂಧಪಟ್ಟಂತೆ ಕೇಸ್ ನಡೆಯುತ್ತಿದೆ.2014 ರಲ್ಲಿ ಸ್ಪೆಷಲ್ ತಶೀಲ್ದಾರ್ ರಾಗಿ ಗೋಪಾಲಸ್ವಾಮಿಯನ್ನ ಆಸ್ಪತ್ರೆಗೆ ನೇಮಕಮಾಡ್ತಾರೆ.
2017 ರಲ್ಲಿ ಸುಭಾಷ್ ಮೋದಿ ಸ್ಟೇ ತಂದು ಟ್ರಸ್ಟಿ ಸ್ಥಾನದಿಂದ ಅವರು ತೆಗೆದುಹಾಕ್ತಾರೆ.ಅಲ್ಲಿಂದ ಯಾರು ಆಸ್ಪತ್ರೆಗೆ ಟ್ರಸ್ಟಿಯಾಗಿಲ್ಲ. ಆದ್ರೆ ಈ ಕಿಶೋರ್ ಮಾನೆ ಮಾತ್ರ ಈ ಆಸ್ಪತ್ರೆ ಸಾರ್ವಜನಿಕ ಸ್ವತ್ತು. ಇದು ಯಾವುದೇ ಕಾರಣಕ್ಕೂ ಸುಭಾಷ್ ಮೋದಿಗೆ ಸೇರುವುದಿಲ್ಲ. ಮೋದಿ ಈ ಪ್ರಾಪರ್ಟಿ ಸಾರ್ವಜನಿಕ ಸ್ವತ್ತು ಅಂತಾ ವಿಲ್ ನಲ್ಲಿ ಬರೆದಿದ್ದಾರೆಂದು ಆಸ್ಪತ್ರೆಯ ಆಡಳಿತಾಧಿಕಾರಿ ಕಿಶೋರ್ ಮಾನೆ ವಾದಿಸುತ್ತಾರೆ.
ಡಾ.ಎಂ ಸಿ ಮೋದಿ ವಿಲ್ ಬರೆದಿಲ್ಲ. ವಿಲ್ ಬರೆಯದೇನೇ ಆಸ್ಪತ್ರೆ ನಡೆಸ್ತಿದ್ರು.ಕಿಶೋರ್ ಮಾನೆ ಹೇಳ್ತಿರುವುದೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಸುಭಾಷ್ ಮೋದಿ ಹೇಳ್ತಿದ್ದಾರೆ.ಇನ್ನು ಆರೋಪ ಮತ್ತು ಪ್ರತ್ಯಾರೋಪಗಳ ಸುಳಿಗಳ ನಡುವೆ ಇತ್ತ ಮಠಾಧೀಶರು ಸುಭಾಷ್ ಮೋದಿ ಪರ ಬ್ಯಾಟಿಂಗ್ ಮಾಡ್ತಿದ್ದಾರೆ.
ಅವರ ತಂದೆ ನೇತ್ರಾದಾನ ಮಾಡುವ ಮೂಲಕ ಸಂಸ್ಥೆಯನ್ನ ಕಟ್ಟಿಬೆಳೆಸಿದ್ದಾರೆ. ಹೀಗಾಗಿ ಸುಭಾಷ್ ಮೋದಿ ಪರ ನಾವೀದೇವೆ ಎಂದು ಮಠಾಧೀಶರು ಮತ್ತು ಸಚಿವರು ಹೇಳ್ತಿದ್ದಾರೆ. ಅವರು ಸಂಸ್ಥೆಯನ್ನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಪಡಲಿ ಎಂದು ಹಾರೈಸುತ್ತಿದ್ದಾರೆ. ಆದ್ರೆ ಈಗ ಎದ್ದಿರುವ ವಿವಾದದಲ್ಲಿ ಯಾವುದು ಸತ್ಯವೋ ,ಯಾವುದು ಅಸತ್ಯವೋ.ಇನ್ನು ಕೋರ್ಟ್ ನಿರ್ಧಾರ ಮಾಡಬೇಕಿದೆ. ಕೋರ್ಟ್ ಯಾವಾಗ ಈ ಕೇಸ್ ಗೆ ಇತಿಶ್ರೀ ಹಾಡುತ್ತೋ ಆಗ ಸತ್ಯ ಹೊರಬೀಳಲಿದೆ.
Kshetra Samachara
14/07/2022 11:43 am