ಬೆಂಗಳೂರು: ಈದ್ಗಾ ಮೈದಾನ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ನಾಳೆ ಚಾಮರಾಜಪೇಟೆ ಬಂದ್‌ಗೆ ಕರೆ ಕೊಟ್ಟಿವೆ. ಈ ಹಿನ್ನಲೆ ಪಶ್ಚಿಮ ವಿಭಾಗ ಪೊಲೀಸರು ಚಾಮರಾಜಪೇಟೆ ಪೇಟೆಯಲ್ಲಿ ಬಿಗಿ ಬಂದೋಬಸ್ತ್‌ಗೆ ಸಿದ್ಧತೆ ನಡೆಸಿದ್ದಾರೆ.
ಭದ್ರತೆಗಾಗಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆಗೆ ಸಿದ್ಧತೆ ನಡೆಸಲಾಗಿದೆ. ಇಬ್ಬರು ಡಿಸಿಪಿ, 10 ಎಸಿಪಿ, 20 ಇನ್‌ಸ್ಪೆಕ್ಟರ್, 120 ಪಿಎಸ್ಐ, 500ಕ್ಕೂ ಹೆಚ್ಚು ಜನ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭದ್ರತೆಯಲ್ಲಿ ನಿಯೋಜನೆಯಾಗಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗ್ತಿದ್ದು, ಆಯ ಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಮತ್ತು ಪೊಲೀಸರೆ ಕದ್ದು ವಿಡಿಯೋ ಚಿತ್ರೀಕರಣ ನಡೆಸಲಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಲಕ್ಷಣ್ ನಿಂಬರ್ಗಿ ನೇತೃತ್ವದಲ್ಲಿ ಬಂದೋಬಸ್ತ್‌ಗೆ ಸಕಲ ಸಿದ್ಧತೆಯಗಿದೆ. ಇನ್ನೂ ಚಮರಾಜಪೇಟೆ ಬಂದ್‌ಗೆ ಪೊಲೀಸರು ಯಾವುದೇ ಅನುಮತಿ ನೀಡಿಲ್ಲ. ಆದರೂ ಸ್ವಯಂ ಪ್ರೇರಿತವಾಗಿ ಬಂದ್‌ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಹಾಗೂ ಕೆಲ ಹಿಂದೂ ಪರ ಸಂಘಟನೆ ಬಂದ್ ಕರೆ ಕೊಟ್ಟಿವೆ. ನಾಳೆ ಬಲವಂತದಿಂದ ಯಾರೂ ಅಂಗಡಿ - ಮುಗ್ಗಟ್ಟು ಮುಚ್ಚಿಸುವಂತಿಲ್ಲ. ಒಂದು ವೇಳೆ ಬಲವಂತವಾಗಿ ಅಂಗಡಿ ಮುಚ್ಚಿಸಿದ್ರೆ ಕೇಸ್ ದಾಖಲು ಮಾಡುವ ಎಚ್ಚರಿಕೆಯನ್ನು ಪೊಲೀಸರು ರವಾನಿಸಿದ್ದಾರೆ.
Kshetra Samachara
11/07/2022 10:07 pm