ರಿಪೋರ್ಟ್- ರಂಜಿತಾಸುನಿಲ್.
ಬೆಂಗಳೂರು: ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ವಿಧಿಸುವ ಸೇವಾ ಶುಲ್ಕವು ಬಹಳ ಹಿಂದಿನಿಂದಲೂ ವಿವಾದದಲ್ಲಿ ಸಿಲುಕಿಕೊಂಡಿದೆ. ಸೇವಾ ತೆರಿಗೆಯ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಆದರೆ ಈ ಸುದ್ದಿ ನಿಮ್ಮ ಎಲ್ಲಾ ಅನುಮಾನಗಳನ್ನು ದೂರ ಮಾಡುತ್ತದೆ.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ವಯಂಚಾಲಿತವಾಗಿ ಅಥವಾ ಪೂರ್ವ ನಿಯೋಜಿತವಾಗಿ ಆಹಾರದ ಬಿಲ್‌ಗಳಿಗೆ ಸೇವಾ ಶುಲ್ಕ ವಿಧಿಸುವುದನ್ನು ಕೇಂದ್ರದ ಗ್ರಾಹಕ ರಕ್ಷಣಾ ಪ್ರಾಧಿಕಾರವು(CCPA) ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ ದೂರು ದಾಖಲಿಸಲು ಸಹ ಗ್ರಾಹಕರಿಗೆ ಅನುವುಮಾಡಿಕೊಟ್ಟಿದೆ.
ಈ ಕುರಿತಂತೆ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಅನ್ಯಾಯದ ವ್ಯಾಪಾರದ ಅಭ್ಯಾಸಗಳು ಮತ್ತು ಸೇವಾ ಶುಲ್ಕ ಹೇರುವ ಮೂಲಕ ಗ್ರಾಹಕರ ಹಕ್ಕುಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಪಿಎ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವಯೋಜಿತವಾಗಿ ಆಹಾರದ ಬಿಲ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ. ಜೊತೆಗೆ ಯಾವುದೇ ಹೆಸರಿನಲ್ಲೂ ಸೇವಾ ಶುಲ್ಕ ಪಡೆಯುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ. ಸೇವಾ ಶುಲ್ಕವು ಸ್ವಇಚ್ಛೆ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂದು ಮೊದಲೇ ಹೇಳಿದೆ.
PublicNext
05/07/2022 09:28 pm