ಬೆಂಗಳೂರು- ರಾಜಧಾನಿ ಬೆಂಗಳೂ ರಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಆಗಬೇಕಾದ್ರೆ ಪ್ರಧಾನಿ ಹಾಗೂ ಪ್ರೆಸಿಡೆಂಟ್ ರವರೇ ಬರಬೇಕಾ ಎಂದು ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಡಿಎ ಗೆ ತರಾಟೆಗೆ ತೆಗೆದುಕೊಂಡಿದೆ.
ಕೋರ್ಟ್ ಆದೇಶ ನೀಡಿದ್ದರೂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಿವೇಶನಗಳಿಗೆ ಒಳ ಚರಂಡಿ, ಕುಡಿಯುವ ನೀರಿನ ಸಂಪರ್ಕ, ರಸ್ತೆ ಸೌಲಭ್ಯ ಕಲ್ಪಿಸದ ಬಿಡಿಎ ವಿರುದ್ಧ ಮಂಜುಳಾ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಕುರಿತು ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿತು.
ಆ ಸಂದರ್ಭದಲ್ಲಿ ಬಿಡಿಎ ಹಾಗೂ ಸರ್ಕಾರವನ್ನು ಜಾಡಿಸಿದ ಕೋರ್ಟ್ ಪ್ರಧಾನಿ ಮೋದಿ ರವರು ಹಾಗೂ ರಾಷ್ಟ್ರಪತಿ ರವರು ಬಂದಾಗ 23 ಕೋಟಿ ವೆಚ್ಚದಲ್ಲಿ ರಸ್ತೆಗಳು ಡಾಂಬರೀಕರಣಗೊಳ್ಳುತ್ತವೆ. ಆದರೆ ಜನ ಸಾಮಾನ್ಯರು ಮಾತ್ರ ನಿತ್ಯ ಹಾಳದ ರಸ್ತೆ ಯಲ್ಲಿ ಸಂಚರಿಸಬೇಕಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿತು. ಎರಡು ವಾರದ ಒಳಗೆ ವಿಶ್ವೇಶ್ವರಯ್ಯ ಬಡವಾಣೆಯಲ್ಲಿ ಮೂಲಸೌಕರ್ಯ ಒದಗಿಸಬೇಕೆಂದು ಆದೇಶಿಸಿತು.
Kshetra Samachara
24/06/2022 10:22 am