ಬೆಂಗಳೂರು: ಒಂದೇ ದಿನ ಎರಡು ಲಕ್ಷ ದಂಡವಸೂಲಿ ಮಾಡುವ ಮೂಲಕ ಕಾಮಾಕ್ಷಿಪಾಳ್ಯ ಸಂಚಾರಿ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಶಿವಣ್ಣ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಂದೇ ದಿನದಲ್ಲಿ 249 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ ಪಿಎಸ್ಐ ಶಿವಣ್ಣ ದಾಖಲೆ ಮೊತ್ತದ 2,04000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ಇದ್ರಲ್ಲಿ ವಿಶೇಷ ಅಂದ್ರೆ ಕಾರು ಸವಾರನಿಂದು 36 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಈ ಹಿಂದೆ ಕಾರಿನ ಮೇಲಿದ್ದ ಸಿಗ್ನಲ್ ಜಂಪ್ ಮತ್ತು ವಿಥ್ ಔಟ್ ಸೀಟ್ ಬೆಲ್ಟ್ ಕೇಸ್ ಗೆ ಸ್ಫಾಟ್ ನಲ್ಲೇ 36ಸಾವಿರ ದಂಡ ಕಟ್ಟಿಸಿದ್ದಾರೆ.
ಒಂದೇ ದಿನ ಒಬ್ಬ ಅಧಿಕಾರಿ ಹೆಚ್ಚು ದಂಡ ವಸೂಲಿ ಮಾಡಿದ ಅಧಿಕಾರಿ ಎಂದು ಪಿಎಸ್ ಐ ಶಿವಣ್ಣ ಅವರನ್ನ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ.
Kshetra Samachara
22/06/2022 05:26 pm