ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋದಿ ಆಗಮನ- ಬೆಂಗಳೂರು ರಸ್ತೆಗಳು ನಿಷೇಧ, ಪರ್ಯಾಯ ಮಾರ್ಗ ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ದೃಷ್ಟಿಯಿಂದ ಏರ್‌ಪೋರ್ಟ್ ರಸ್ತೆ ಸಂಚಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೂ ಸಾರ್ವಜನಿಕ ಸಂಚಾರಕ್ಕೆ ಬಂದ್ ಆಗಲಿದೆ.

ಈ ಹಿನ್ನಲೆಯಲ್ಲಿ ನಗರದಿಂದ ದೇವನಹಳ್ಳಿ ಏಪೋರ್ಟ್‌ಗೆ ಹೋಗುವ ಮತ್ತು ಏರ್‌ಪೋರ್ಟ್ ನಿಂದ ಬರುವ ಪ್ರಯಾಣಿಕರಿಗೆ ಪರ್ಯಾಯ ರಸ್ತೆ ಸಂಚಾರಕ್ಕೆ ಮಾರ್ಗ ಬದಲಿಸಲು ಬೆಂಗಳೂರು ನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಪ್ರಮುಖವಾಗಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30ರ ಸಮಯದಲ್ಲಿ ಫ್ಲೈಓವರ್ ಬಳಸದಂತೆ ಖಡಕ್ ಆಗಿ ಸೂಚಿಸಲಾಗಿದೆ. ಕೆ.ಆರ್ ಪುರ ಕಡೆಯಿಂದ ಬರುವ ವಾಹನ- ರಾಮಮೂರ್ತಿನಗರ, ಹೆಣ್ಣೂರು, ಬೈರತಿ ಕ್ರಾಸ್, ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್, ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ಏರ್ಪೋರ್ಟ್ ಪ್ರವೇಶ.

ತುಮಕೂರು ಕಡೆಯಿಂದ ಬರುವ ವಾಹನ- ಗೊರಗುಂಟೆಪಾಳ್ಯ, ಗಂಗಮ್ಮನಗುಡಿ ಸರ್ಕಲ್, ನಾಗೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ವಿದ್ಯಾನಗರ, ಸಾದಹಳ್ಳಿ ಗೇಟ್ ಮೂಲಕ ಏರ್‌ಪೋರ್ಟ್‌ಗೆ ತೆರಳಬಹುದು.

ವಿಧಾನಸೌಧ, ರಾಜಭವನ ಕಡೆಯಿಂದ ಹೋಗುವ ವಾಹನ- ಕಾವೇರಿ ಜಂಕ್ಷನ್ ಎಡತಿರುವು, ಸಂಪಿಗೆ ರಸ್ತೆ, ಯಶವಂತಪುರ ಸರ್ಕಲ್, ಮತ್ತಿಕೆರೆ ಕ್ರಾಸ್, ಬಿಇಎಲ್ ಸರ್ಕಲ್, ಎಂಎಸ್ ಪಾಳ್ಯ, ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್, ನಾಗೇನಹಳ್ಳಿ, ರಾಜಾನುಕುಂಟೆ, ಸಾದಹಳ್ಳಿ ಗೇಟ್ ಮೂಲಕ ಏರ್ಪೋರ್ಟ್ಗೆ ತೆರಳಲು ಸೂಚಿಸಲಾಗಿದೆ.

ಕಂಟೋನ್ಮೆಂಟ್, ಜೆಸಿನಗರ ಕಡೆಯಿಂದ ಹೋಗುವ ವಾಹನಗಳು- ಜಯಮಹಲ್ ಮುಖ್ಯರಸ್ತೆ, ವಾಟರ್ ಟ್ಯಾಂಕ್ ಜಂಕ್ಷನ್, ಕಾವಲ್ ಬೈರಸಂದ್ರ, ನಾಗವಾರ, ಕೊತ್ತನೂರು, ಬಾಗಲೂರು, ಮೈಲನಹಳ್ಳಿ, ಬೇಗೂರು ಮೂಲಕ ಏರ್‌ಪೋರ್ಟ್‌ಗೆ ತೆರಳಲು‌ ನಗರ ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

Edited By : Shivu K
PublicNext

PublicNext

20/06/2022 11:24 am

Cinque Terre

23.54 K

Cinque Terre

0

ಸಂಬಂಧಿತ ಸುದ್ದಿ