ಬೆಂಗಳೂರು: ಈದ್ಗಾ ಮೈದಾನ ಸಂಬಂಧ ಬಿಬಿಎಂಪಿ ನೋಟಿಸ್ ಗೆ ವಕ್ಫ್ ಬೋರ್ಡ್ ದಾಖಲೆ ಕೊಡಲು ಮುಂದಾಗಿಲ್ಲ. ಬಿಬಿಎಂಪಿ ಈ ಜಾಗ ನಮ್ಮದು ಎಂದು ಈಗಾಗಲೇ ತಿಳಿಸಿದೆ ಈ ವಿರುದ್ಧ ಕಾನೂನು ಹೋರಾಟ ಎನ್ನುವ ವಿಚಾರ ಅಸಮರ್ಪಕ ಎಂದು ಪಾಲಿಕೆ ವಿಶೇಷ ಆಯುಕ್ತ ದೀಪಕ್ ಹೇಳಿದರು.
ಇಂದು ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಮಾತನಾಡಿ ಸದ್ಯ ಈಗಲೂ ಬಿಬಿಎಂಪಿಯದೇ ಜಾಗ ಎಂದು ದಾಖಲೆ ಹೇಳುತ್ತಿದ್ದೇವೆ. ಒಂದು ಸರ್ಕಾರಿ ಇಲಾಖೆ ಕೇಳಿದಾಗ ಅದಕ್ಕೆ ಸಭಂಧಿಸಿದ ದಾಖಲೆ ಕೊಡಬೇಕು ಎಂದರು.
ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ವಕ್ಪ್ ಬೊರ್ಡ್ ಅನುಮತಿ ಪಡೆದಿಲ್ಲ ಎನ್ನುವ ವಿಚಾರ ಸರಿಯಲ್ಲ. ಇದು ಪೊಲೀಸ್ ಹಾಗೂ ಕಂದಾಯ ಇಲಾಖೆ ಚರ್ಚೆ ಮಾಡಿ ಜಾರಿಗೆ ತಂದಿರುವ ನಿಯಮ. ಇಂದು ಬಿಬಿಎಂಪಿ ನೋಟಿಸ್ ಗೆ ಉತ್ತರ ಕೊಡಲು ವಕ್ಪ್ ಬೋರ್ಡ್ ಗೆ ಕಡೆಯ ದಿನ. ನೋಟಿಸ್ ಗೆ ಉತ್ತರ ಕೊಡದಿದ್ದರೆ ಮತ್ತೆ ಸಮಯಾವಾಕಾಶ ಕೊಡಲಾಗುತ್ತದೆ ಎಂದು ವಿಶೇಷ ಆಯುಕ್ತ ದೀಪಕ್ ತಿಳಿಸಿದರು.
Kshetra Samachara
17/06/2022 05:59 pm