ಬೆಂಗಳೂರು: ಕಾರಾಗೃಹ ಡಿಐಜಿ ಆಗಿದ್ದ ಸಮಯದಲ್ಲಿ ಡಿ.ರೂಪಾ ವಿರುದ್ಧದ ಮಾನನಷ್ಟ ಪ್ರಕರಣ ಹೈಕೋರ್ಟ್ ರದ್ದು ಪಡಿಸಿ ಆದೇಶಿಸಿದೆ. ದೂರಿಗೆ ಮೊದಲು ಸರ್ಕಾರದ ಪೂರ್ವಾನುಮತಿ ಪಡೆಯದ ಹಿನ್ನೆಲೆ ನಿವೃತ್ತ ಐಪಿಎಸ್ ಅಧಿಕಾರಿ ಹೆಚ್.ಎನ್. ಸತ್ಯನಾರಾಯಣ ರಾವ್ ದಾಖಲಿಸಿದ್ದ ದೂರನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕಾರಾಗೃಹ ಡಿಜಿಪಿ ಐಜಿಯಾಗಿದ್ದ ಹೆಚ್.ಎನ್.ಸತ್ಯನಾರಾಯಣ ರಾವ್ ವಿರುದ್ಧ ಡಿ.ರೂಪಾ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಆರೋಪ ಮಾಡಿ ಪತ್ರ ಬರೆದಿದ್ರು. ಜಯಲಲಿತಾ ಆಪ್ತೆ ಶಶಿಕಲಾಗೆ ಅಡುಗೆಮನೆಯ ವಿಶೇಷ ಸವಲತ್ತು ಹಾಗೂ 2 ಕೋಟಿ ಪಡೆದು ವಿಶೇಷ ಸವಲತ್ತು ಕಲ್ಪಿಸಿದ ಆರೋಪದ ಜೊತೆಗೆ ದಿ. ಕರೀಂ ಲಾಲಾ ತೆಲಗಿ ಸೇವೆಗೆ ಸಹಖೈದಿಗಳ ಬಳಕೆ ಆರೋಪ ಮಾಡಿದ್ದ ಡಿ.ರೂಪಾ ಕ್ರಮ ಕೈಗೊಳ್ಳುವಂತೆ ಡಿಜಿಪಿ ಐಜಿ ಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಹೆಚ್.ಎನ್. ಸತ್ಯನಾರಾಯಣರಾವ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣ ರದ್ದು ಕೋರಿ ಡಿ.ರೂಪಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು. ವ್ಯಕ್ತಿಗಳ ನಡುವಿನ ಅಧಿಕೃತ ಪತ್ರ ವ್ಯವಹಾರ ಮಾನನಷ್ಟವಾಗುವುದಿಲ್ಲ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ಸತ್ಯನಾರಾಯಣ ರಾವ್ ದೂರನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
Kshetra Samachara
15/06/2022 08:44 pm