ಬೆಂಗಳೂರು: ಬೆಂಗಳೂರು DC ಕಛೇರಿ ಯಲ್ಲಿ ಲಂಚ ಪಡೆಯುವಾಗ ಡೆಪ್ಯೂಟಿ ತಹಶೀಲ್ದಾರ್ ಮಹೇಶ್ ಮತ್ತು ಡಿಸಿ ಮಂಜುನಾಥ್ ಸಹಾಯಕ ಚಂದ್ರುಶೇಖರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸದ್ಯ ಎಸಿಬಿ ಚಂದ್ರು ಶೇಖರ್ ಎಂಬಾತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಎಸಿಬಿ ಡಿವೈಎಸ್ ಪಿ ರವಿಶಂಕರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಮಹೇಶ್ ಬಳಿ ಹಣವಿರುವುದು ಪತ್ತೆಯಾಗಿದೆ.
ಇನ್ನು ಮಹೇಶ್ ಡಿಸಿ ಮಂಜುನಾಥ್ ರವರ ಜೊತೆ ಕೆಲಸ ಮಾಡುತ್ತಿದ್ದ ಅಧಿಕಾರಿಯಾಗಿದ್ದಾನೆ. ಆಜಾಂ ಪಾಷ ಎಂಬಾತನಿಗೆ ಜಮೀನಿನ ವ್ಯಾಜ್ಯ ಎಸಿ ಕೋರ್ಟ್ ನಲ್ಲಿ ತೀರ್ಮಾನ ಆಗಿ ಡಿಸಿ ಕೋರ್ಟ್ ಗೆ ಹೋಗಿತ್ತು. ಈ ಪೈಲ್ ಅನ್ನು ಇತ್ಯರ್ಥ ಮಾಡಿಕೊಡಲು ಹದಿನೈದು ಲಕ್ಷ ಕೇಳಿ ಐದು ಲಕ್ಷಕ್ಕೆ ಒಪ್ಪಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ದೂರುದಾರ ಎಸಿಬಿಗೆ ದೂರು ನೀಡಿದ್ದರು. ಇಂದು ಐದು ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಮಾಡಿದ ಟ್ರ್ಯಾಪ್ ನಲ್ಲಿ ಭ್ರಷ್ಟರು ಲಾಕ್ ಆಗಿದ್ದಾರೆ. ಡಿಸಿ ಮಂಜುನಾಥ್ ವಿರುದ್ಧವು ದೂರುದಾರ ಆರೋಪಿಸಿದ್ದಾರೆ. ಈ ಹಿನ್ನೆಲೆ ಸದ್ಯ ಮಹೇಶ್ ಹಾಗೂ ಚಂದ್ರು ವಿಚಾರಣೆ ನಡೆಸಿ ಡಿಸಿ ಪಾತ್ರ ಕಂಡು ಬಂದ್ರೆ ಅವರ ಮೇಲೂ ಕ್ರಮ ಕೈಗೊಳ್ಳುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
PublicNext
21/05/2022 05:40 pm