ಬೆಂಗಳೂರು: ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಫೀಕರ್ ಅಳವಡಿಕೆಗೆ ಅನುಮತಿ ಪಡೆಯಲು ನಗರ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಅನುಮತಿ ಪಡೆಯಲು ಸಂಬಂಧಪಟ್ಟ ಧಾರ್ಮಿಕ ಮುಖಂಡರು ಅರ್ಜಿ ಸಲ್ಲಿಸಬೇಕು. ಇದೇ ತಿಂಗಳು 25 ರ ಒಳಗಾಗಿ ಆಯಾ ಎರಿಯಾದ ಎಸಿಪಿ ಕಚೇರಿಗಳಿಗೆ ತೆರಳಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಅನುಮತಿ ಪಡೆಯದೆ ಹೋದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ರಾತ್ರಿ 10ರಿಂದ ಮುಂಜಾನೆ 6ರವರೆಗೆ ಯಾವುದೇ ಲೌಡ್ ಸ್ಪೀಕರ್ ಬಳಸಲು ಅವಕಾಶವಿಲ್ಲ. ವಿಶೇಷ ಸಮಯದಲ್ಲಿ ಅವಕಾಶವಿದೆ. ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆ ಮೀಟಿಂಗ್ ಆದ ಮೇಲೆ ಸರ್ಕಾರ ಡಿಸೆಬಲ್ ಲೀಮಿಟ್ಸ್ ಅನುಮೋದಿಸಿ ಆದೇಶ ಹೊರಡಿಸಿತ್ತು. ಸದ್ಯ ಈಗಿರುವ ಲೌಡ್ ಸ್ಪೀಕರ್ ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಪಡೆಯಲು ಹದಿನೈದು ದಿನ ಕಾಲಾವಕಾಶ ನೀಡಿದ್ದಾರೆ.
Kshetra Samachara
12/05/2022 09:01 pm