ಬೆಂಗಳೂರು : ಮಸೀದಿಗಳಲ್ಲಿ ಆಜಾನ್ ಕೂಗುವ ಮೈಕ್ ಗಳಿಂದ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಡೆಸಿಬಲ್ ಹೊರಬರ್ತಿದೆ ಅಂತಾ ಹಿಂದೂ ಸಂಘಟನೆಗಳು ಹುಯಿಲೆಬ್ಬಿಸಿದಾಗ, ತಣ್ಣಗಿದ್ದ ಟಾಪಿಕ್ ಮುನ್ನೆಲೆಗೆ ಬಂದಿತ್ತು. ಡಿಜಿ ಅಂಡ್ ಐಜಿಪಿ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿ ಹೈ ಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲನೆ ಮಾಡುವಂತೆ ಸೂಚನೆ ಕೊಟ್ಟಿದ್ರು.ಇದಕ್ಕೂ ಮೊದಲು ಬೆರಳೆಣಿಕೆಯಷ್ಟು ನೋಟಿಸ್ ಕೊಟ್ಟಿದ್ದ ಪೊಲೀಸ್ರು ಕಳೆದ 15 ದಿನಗಳಲ್ಲಿ ನೂರಾರು ನೋಟಿಸ್ ಕೊಟ್ಟಿದ್ದಾರೆ.
ಮಸೀದಿಗಳು - 318
ಮಂದಿರಗಳು - 396
ಚರ್ಚ್ - 98
ರೆಸ್ಟೋರೆಂಟ್ - 34
ಇತರೆ - 77
ಇದು ಈವರೆಗೆ ಒಟ್ಟಾರೆ ಜಾರಿಯಾದ ನೋಟಿಸ್ ಗಳು.. ಕಳೆದ 15 ದಿನಗಳಲ್ಲಿ ನೋಟಿಸ್ ಗಳ ಸಂಖ್ಯೆ ಜಾಸ್ತಿಯಾಗಿದೆ.. ಈ ಹಿಂದೆ ಕೇವಲ 125 ಮಸೀದಿಗಳಿಗೆ ನೋಟಿಸ್ ನೀಡಲಾಗಿದ್ದು, ಇಶ್ಯೂ ಮುನ್ನೆಲೆಗೆ ಬಂದ ನಂತ್ರ ಅದ್ರ ಸಂಖ್ಯೆ 318 ಕ್ಕೆ ಏರಿದೆ.. ಇನ್ನು ಕೇವಲ 83 ಮಂದಿರಗಳಿಗೆ ನೋಟಿಸ್ ನೀಡಿದ್ದ ಸಂಖ್ಯೆ ಇದೀಗ 396 ಕ್ಕೆ ಬಂದು ನಿಂತಿದೆ. 22 ಚರ್ಚ್ ಗಳಿಗೆ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಇದೀಗ 98 ಚರ್ಚ್ ಗಳಿಗೆ ನೋಟಿಸ್ ನೀಡಲಾಗಿದೆ.
ಮಸೀದಿಗಳು
ಹಿಂದೆ - 125
ಈಗ - 193
ಒಟ್ಟು - 318
ಮಂದಿರಗಳು
ಹಿಂದೆ - 83
ಈಗ - 313
ಒಟ್ಟು - 396
ಚರ್ಚ್
ಹಿಂದೆ - 22
ಈಗ - 76
ಒಟ್ಟು - 98
ಹೈಕೋರ್ಟ್ ರಜಾ ಕಾಲ ಮುಗಿದ ಬಳಿಕ ಪ್ರಾರ್ಥನಾ ಮಂದಿರಗಳಲ್ಲಿನ ಶಬ್ದ ಮಾಲಿನ್ಯ ಪ್ರಕರಣ ವಿಚಾರಣೆಗೆ ಬರಲಿದೆ.. ಎಲ್ಲೆಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ರೂಲ್ಸ್ ವೈಯ್ಲೇಷನ್ ಆಗಿದೆ. ಕೈಗೊಂಡ ಕ್ರಮಗಳೇನು ಅನ್ನೋ ಬಗ್ಗೆ ಪೊಲೀಸ್ ಇಲಾಖೆ ಹೈ ಕೋರ್ಟ್ ಗೆ ವರದಿ ನೀಡಬೇಕಿದ್ದು, ತಯಾರಿ ಮಾಡಿಕೊಳ್ಳಲಾಗ್ತಿದೆ.
Kshetra Samachara
22/04/2022 09:51 pm