ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಲಿತರ ಜಾಗ ಕಬಳಿಸಲು ಹುನ್ನಾರ?; ನ್ಯಾಯಕ್ಕಾಗಿ ಹಿರಿಯ ಜೀವಗಳ ಮೊರೆ

ಆನೇಕಲ್: ಇಳಿವಯಸ್ಸಿನಲ್ಲಿ ಮಕ್ಕಳು- ಮೊಮ್ಮಕ್ಕಳ ಜೊತೆ ಹಾಯಾಗಿ ಕಾಲ ಕಳೆಯಬೇಕಾದ ಹಿರಿಯರು ಪ್ರತಿ ತಿಂಗಳು ಕೋರ್ಟ್- ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ! ಕಾರಣ ದಲಿತರ ಜಮೀನನ್ನು ಕಬಳಿಸಲು ಬಲಾಢ್ಯರ ಜೊತೆ ಕೆಲ ಕಾಣದ ಕೈಗಳು ಹುನ್ನಾರ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ದಲಿತ ಕುಟುಂಬಗಳು ನ್ಯಾಯಕ್ಕಾಗಿ ʼಪಬ್ಲಿಕ್ ನೆಕ್ಸ್ಟ್ʼ ನೊಂದಿಗೆ ಅಳಲು ತೋಡಿಕೊಂಡಿದ್ದಾರೆ.

ಹೌದು, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಪಂ ವ್ಯಾಪ್ತಿಯ ಸಿಂಗೇನ ಅಗ್ರಹಾರ ಗ್ರಾಮದಲ್ಲಿ ದಲಿತ ಕುಟುಂಬಗಳು ಹಲವು ವರ್ಷಗಳಿಂದಲೂ ವಾಸವಾಗಿವೆ. ಆದರೆ, ಇತ್ತೀಚೆಗೆ ಉಳ್ಳವರು ಜಮೀನನ್ನು ಕಬಳಿಸಲು ಹುನ್ನಾರ ನಡೆಸುತ್ತಿರುವ ಆರೋಪವಿದೆ.

ಇನ್ನು ಸಿಂಗೇನ ಅಗ್ರಹಾರ ಗ್ರಾಮದಲ್ಲಿ ದಲಿತ ಕುಟುಂಬ ಯಲ್ಲಪ್ಪ ಎಂಬವರಿಗೆ 50 ವರ್ಷಗಳ ಹಿಂದೆ ಸರ್ವೆ ನಂಬರ್ 1/2 ರಲ್ಲಿ 23 ಗುಂಟೆ ಜಾಗವನ್ನು ಎಸ್.ಪಿ. ರಾಮಣ್ಣ ಅವರ ಕಡೆಯಿಂದ ಯಲ್ಲಪ್ಪ‌ ಬಿನ್‌ ಪಿಲ್ಲಯ್ಯ‌ ಎಂಬವರು ಆ ಜಾಗ ಖರೀದಿಸಿದರಂತೆ. ಇವರ ಹೆಸರಿಗೆ ಕ್ರಯ ಸಹ ಆಗಿತ್ತಂತೆ.

ಆದರೆ, 9ನೇ ಕಾಲಂನಲ್ಲಿ ಚೇರ್ಮನ್ ನಾರಾಯಣ ಘಟ್ಟ ಎಂಬ ಹೆಸರಲ್ಲಿ ಬರ್ತಿದೆ. ಈಗಾಗಿ ಖಾತೆ ಬದಲಾವಣೆಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿ, ಯಲ್ಲಪ್ಪ ಬಿನ್ ಪಿಲ್ಲಯ್ಯ ಅವರಿಗೆ ಜಂಟಿ ಕ್ರಯ ಮಾಡಲು ಆದೇಶ ಕೊಡಿಸಿದ್ರು.

ಈ ವಿಚಾರವಾಗಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ 2 ವರ್ಷಗಳಿಂದ ಕೋರ್ಟ್ ಗೆ ಅಲೆಯುವ ಸ್ಥಿತಿ ಎದುರಾಗಿದೆ. ಹೀಗಾಗಿ ತಮಗೆ ನ್ಯಾಯ ಕೊಡಿಸುವಂತೆ ಮಾಧ್ಯಮಗಳ ಮುಂದೆ ಹಿರಿಯ ಜೀವ ನೋವು ವ್ಯಕ್ತಪಡಿಸಿದ್ದಾರೆ.

- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್

Edited By : Nagesh Gaonkar
Kshetra Samachara

Kshetra Samachara

06/04/2022 11:07 am

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ