ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಮನೆಯಲ್ಲಿದ್ದು‌ಕೊಂಡೇ ಬಂದ್ ಬೆಂಬಲಿಸಿ"; ಮುಸ್ಲಿಂ ಮುಖಂಡರ ಕರೆ

ಬೆಂಗಳೂರು: ಕೆಲವು ಮುಸ್ಲಿಂ ಸಂಘಟನೆಗಳು ನಾಳೆ ʼಕರ್ನಾಟಕ ಬಂದ್ʼ ಗೆ ಕರೆ ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಕಮಿಷನರ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಎಲ್ಲಾ ವಿಭಾಗದ ಡಿಸಿಪಿ ಮತ್ತು ಮುಸ್ಲಿಂ ಧರ್ಮಗುರುಗಳು, ಮುಖಂಡರೊಂದಿಗೆ ಸಭೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ನಗರಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸೂಕ್ಷ್ಮ ಪ್ರದೇಶಗಳಾದ ಜೆ.ಜೆ. ನಗರ, ಬ್ಯಾಟರಾಯನಪುರ, ಶಿವಾಜಿನಗರ, ಆರ್.ಟಿ. ನಗರ, ಜೆ.ಸಿ. ನಗರದಲ್ಲಿ ಹೆಚ್ಚಿನ‌ ಭದ್ರತೆ ಏರ್ಪಡಿಸಲಾಗಿದ್ದು, ಈ ಬಗ್ಗೆ ಮುಸ್ಲಿಂ ಮುಖಂಡರಿಗೂ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಇನ್ನು ಭದ್ರತೆಗಾಗಿ 25 ಕೆಎಸ್ ಆರ್ ಪಿ, 35 ಸಿಎಆರ್ ತುಕಡಿ ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ.

ಬಲವಂತವಾಗಿ ಅಂಗಡಿ ಮುಂಗಟ್ಟು ಹಾಗೂ ಆಫೀಸ್ ಗೆ ಹೋಗುವವರನ್ನು ತಡಿಯೋದಿಲ್ಲ‌ ಎಂದು ಸಭೆಯಲ್ಲಿ ಮುಸ್ಲಿಂ ಮುಖಂಡರು ತಿಳಿಸಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದರು.

ಸಭೆ ಬಳಿಕ‌ ಮಾತನಾಡಿದ ಮುಸ್ಲಿಂ ಧರ್ಮಗುರುಗಳು, ‌ನಾಳಿನ ಬಂದ್ ಶಾಂತಿಯುತವಾಗಿ ‌ನಡೆಯುವಂತೆ ಎಲ್ರಿಗೂ ಮಾಹಿತಿ ನೀಡಲಾಗಿದೆ. ನಮಗಾಗಿರುವ ನೋವಿಗೆ ನಾವು ಈ ಬಂದ್ ಮಾಡ್ತಿದ್ದೇವೆ. ಎಲ್ರೂ ಮನೆಯಲ್ಲೇ ಇರಬೇಕು, ಯಾರೂ ಹೊರಗೆ ಬರಬಾರದು. ಮೈದಾನದಲ್ಲಿ ಗುಂಪು ಸೇರೋದು, ಭಾಷಣ ಯಾವುದನ್ನೂ ಮಾಡದಂತೆ‌ ಸೂಚಿಸಿದ್ದೇವೆ ಎಂದರು.

Edited By :
PublicNext

PublicNext

16/03/2022 10:00 pm

Cinque Terre

49.73 K

Cinque Terre

20

ಸಂಬಂಧಿತ ಸುದ್ದಿ