ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಯಮ ಉಲ್ಲಂಘನೆ : ಒಂದೇ ಪ್ರದೇಶದಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?

ಬೆಂಗಳೂರು: ರಸ್ತೆ ನಿಯಮ ಉಲ್ಲಂಗಿಸದಿರಲೆಂದು ಎಷ್ಟೇ ಕಠಿಣ ಕ್ರಮಗಳನ್ನು ಜಾರಿ ಮಾಡಿದರು ಜನ ಮಾತ್ರ ರೂಲ್ಸ್ ಬ್ರೇಕ್ ಮಾಡುವ ಪರಿ ಮುಂದುವರೆಸಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯ ಕಾಮಾಕ್ಷಿ ಪಾಳ್ಯ ಸಂಚಾರ ಠಾಣೆ ಸಬ್ ಇನ್ಸ್ಪೆಕ್ಟರ್ ಎಂ. ಶಿವಣ್ಣ ಅವರು ಒಂದೇ ದಿನ 1,02,500 ರೂ. ದಂಡ ವಸೂಲಿ ಮಾಡಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿರುವ ವಾಹನಗಳ ಮಾಲೀಕರು ದಂಡ ಪಾವತಿ ಮಾಡದೆ ಓಡಾಡುತ್ತಿರುವುದನ್ನು ಪತ್ತೆ ಮಾಡಿ ದಂಡ ವಸೂಲಿ ಮಾಡಿದ್ದಾರೆ. ಇದರಲ್ಲಿ ಹೆಚ್ಚಾಗಿ ಹೆಲ್ಮೆಟ್ ರಹಿತ ಚಾಲನೆ, ಮೊಬೈಲ್ ಬಳಕೆ ಹೆಚ್ಚಾಗಿವೆ. ಲಂಚದ ಆರೋಪ ಬರದಂತೆ ಪಾರದರ್ಶಕತೆ ಕಾಪಾಡಲು ಬಾಂಡಿ ವಾಮ್೯ ಕ್ಯಾಮರಾ ಅಳವಡಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ.

ಸದ್ಯ ಪಿಎಸ್ಐ ಎಂ. ಶಿವಣ್ಣ ಅವರ ಕರ್ತವ್ಯಕ್ಕೆ ಶ್ಲಾಘಿನೆ ವ್ಯಕ್ತವಾಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

13/02/2022 10:53 am

Cinque Terre

786

Cinque Terre

0

ಸಂಬಂಧಿತ ಸುದ್ದಿ