ಬೆಂಗಳೂರು: ನಗರದಲ್ಲಿ ಕಳೆದ ಕಲ ದಿನಗಳಿಂದ ಸಂಚಾರಿ ಪೊಲೀಸರದ್ದೆ ಸುದ್ದಿ ಸದ್ಯ ಈ ಇಲಾಖೆಯಲ್ಲಿ ಸಾಕಷ್ಟ ಬದಲಾವಣೆ ತರಲು ಇಲಾಖೆ ನಿರ್ಧರಿಸಿದೆ. ಟೋಯಿಂಗ್ ಕುರಿತು ಹೊಸ ರೂಪು ರೇಷ ಜಾರಿಯಾಗುತ್ತಿದೆ. ಈ ಬೆನ್ನಲ್ಲೆ ಸ್ಪಾಟ್ ಪೈನ್ ಗೂ ಬ್ರೇಕ್ ಹಾಕಲು ಇಲಾಖೆ ತೀರ್ಮಾನಿಸಿದೆ.
ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಪೊಲೀಸರು ಸ್ಥಳದಲ್ಲಡೆ ದಂಡವಸೂಲಿ ಮಾಡಲ್ಲ.ಬದಲಿಗೆ ಸವಾರರ ಮನೆಗೆ ಆನ್ ಲೈನ್ ನಲ್ಲಿ ನೋಟಿಸ್ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ.ಇದರಿಂದ ಸಂಚಾರಿ ಪೊಲೀಸರು ಲಂಚ ಪಡೆಯುತ್ತಾರೆ, ಕಿರಿ ಕಿರಿ ಮಾಡ್ತಾರೆ ಅನ್ನೋ ಆರೋಪದ ಜೊತೆಗೆ ಟ್ರಾಫಿಕ್ ಕಿರಿಕಿರಿ ತಪ್ಪುತ್ತೆ ಎನ್ನುವುದು ಅಧಿಕಾರಿಗಳ ಪ್ಲಾನ್.
ಇನ್ನು ದಂಡ ವಸೂಲಿಯನ್ನು ಆರ್ ಟಿಓ ಅಧಿಕಾರಿಗಳ ಹೆಗಲಿಗೆ ಹಾಕಿದ್ದು. ಆರ್ ಟಿಓ ಅಧಿಕಾರಿಗಳ ಸಹಾಯಕ್ಕೆ ಓರ್ವ ಪಿಎಸ್ ಐ ಹಾಗೂ ಎಎಸ್ ಐ ಎ ರನ್ನು ಶಾಶ್ವತವಾಗಿ ನಿಯೋಜನೆ ಮಾಡಲು ಆದೇಶ ಹೊರಡಿಸಿದೆ.
ನಗರದ ಕೋರಮಂಗಲ, ರಾಜಾಜಿನಗರ, ಕಸ್ತೂರಿನಗರ, ಯಶವಂತಪುರ, ಜಯನಗರ, ಆರ್.ಆರ್.ನಗರ, ದೇವನಹಳ್ಳಿ, ಕೆಆರ್ ಪುರ, ಯಲಹಂಕ ಹಾಗೂ ಎಲೆಕ್ಟ್ರಾನಿಕ್ ಸಿಟಿ ಆರ್ ಟಿಓ ಕಚೇರಿಗಳಿಗೆ ನವೀಕರಣ, ವಾಹನ ಪರವಾನಗಿ.. ವಿವಿಧ ಕಾರಣಕ್ಕಾಗಿ ವಾಣಿಜ್ಯ ಹಾಗೂ ಇತರೆ ವಾಹನಗಳ ಬಂದಾಗ ಬಾಕಿ ಇರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸಂಚಾರಿ ಪೊಲೀಸರು ದಂಡ ವಸೂಲಿ ಮಾಡಲಿದ್ದಾರೆ.
Kshetra Samachara
05/02/2022 09:37 am