ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಡಿಜಿಪಿ ದಯಾನಂದ ಸೇರಿ ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ

ಬೆಂಗಳೂರು : ಗಣರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ರಾಷ್ಟ್ರದ ಉನ್ನತ ಪ್ರಶಸ್ತಿ ರಾಷ್ಟ್ರಪತಿ ಪದಕ ಪ್ರಶಸ್ತಿಯನ್ನ ರಾಜ್ಯದ 19ಪೊಲೀಸ್ ಅಧಿಕಾರಿಗಳಿಗೆ ಘೋಷಿಸಿದ್ದಾರೆ. ಅತ್ಯುತ್ತಮ ಸಾಧನೆ ಹಾಗೂ ಉತ್ತಮ ಕಾರ್ಯವೈಖರಿಗೆ ನೀಡಲಾಗುವ ಗೌರವ ಇದಾಗಿದ್ದು, ರಾಷ್ಟ್ರಪತಿ ಪದಕ ಪಡೆದ ಅಧಿಕಾರಿಗಳ ವಿವರ ಇಂತಿದೆ.

ಬಿ ದಯಾನಂದ್, - ಗುಪ್ತಚರ ಇಲಾಖೆ ಎಡಿಜಿಪಿ

ಆರ್. ಹಿತೇಂದ್ರ, ಎಡಿಜಿಪಿ ಕ್ರೈಮ್ ಆಂಡ್ ಟೆಕ್ನಿಕಲ್ ಸರ್ವಿಸ್

ಬಿ. ಆರ್. ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ ಸಂಚಾರ ಬೆಂಗಳೂರು.

ರಾಮಯ್ಯ ಜನಾರ್ಧನ್, ಕಮಾಂಡೆಂಟ್ ಕೆಎಸ್ ಆರ್ ಪಿ 5ನೇ ಬೆಟಾಲಿಯನ್.

ಕುಮಾರ ಡಿ, ಎಸಿಪಿ ಹಲಸೂರು ಉಪವಿಭಾಗ.

ಪ್ರಭುದೇವ್ ರವಿಪ್ರಸಾದ್, ಡಿಎಸ್ ಪಿ ಹುಣಸೂರು ಉಪವಿಭಾಗ.

ವೆಂಕಟಪ್ಪ ನಾಯಕ ಓಲೇಕರ್, ಡಿಎಸ್ ಪಿ ಸಿಂದನೂರು.

ಮಲ್ಲೇಶಯ್ಯ .ಎಂ, ಡಿ ಎಸ್ ಪಿ , ಆನೇಕಲ್ ಉಪವಿಭಾಗ.

ಯಶವಂತಕುಮಾರ್, ಡಿಎಸ್ ಪಿ ಸೈಬರ್ ಕ್ರೈಂ ಸಿಐಡಿ.

ಗಂಗಾಧರ್ ಮಠಪತಿ, ಎಸಿಪಿ ಸಿಸಿಆರ್ ಬಿ, ಕಲಬುರಗಿ.

ಕೆ.ಎಂ ರಮೇಶ್ , ಡಿಎಸ್ಪಿ ಕರ್ನಾಟಕ ಲೋಕಾಯುಕ್ತ.

ಎಸ್. ಬಿ. ಕೆಂಪಯ್ಯ, ಡಿಎಸ್ ಪಿ ಸಿಐಡಿ

ಕೃಷ್ಣಮೂರ್ತಿ ಎಸ್ , ಇನ್ಸ್ಪೆಕ್ಟರ್ ಲೋಕಾಯುಕ್ತ.

ಸಿ ಎಸ್ ಸಿಂಪಿ, ಕೆಎಸ್ ಆರ್ ಪಿ 1ನೇ ಬೆಟಾಲಿಯನ್ ಬೆಂಗಳೂರು.

ಮಹಮ್ಮದನೀಫ್, ಎಆರ್ ಎಸ್ ಐ, ಡಿಎಆರ್ ಬೆಳಗಾವಿ.

ಎಂ ಹೆಚ್ ರೇವಣ್ಣ, ಎಎಸ್ ಐ, ಜಂಟಿ ಸಿಪಿ ಕಛೇರಿ ಬೆಂಗಳೂರು.

ಇನ್ನೂ ಪದಕ ವಿಜೇತರಿಗೆ ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪದಕ ನೀಡಿ ಗೌರವಿಸಲಾಗುವುದು.

Edited By : Nirmala Aralikatti
PublicNext

PublicNext

25/01/2022 06:26 pm

Cinque Terre

13.57 K

Cinque Terre

0

ಸಂಬಂಧಿತ ಸುದ್ದಿ