ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಾಫ್ ಹೆಲ್ಮೆಟ್ ಬಗ್ಗೆ ಜಾಗೃತಿ : ಟಿಪ್ಪರ್ ಅಡಿ ಕಳಪೆ ಹೆಲ್ಮೆಟ್

ಬೆಂಗಳೂರು: ಬೈಕ್ ಚಾಲನೆ ವೇಳೆ ಸುರಕ್ಷಿತವಾದ ಹೆಲ್ಮೆಟ್ ಧರಿಸುವಂತೆ ಟ್ರಾಫಿಕ್ ಪೊಲೀಸರು ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಸಂಚಾರ ಪೊಲೀಸರ ಅರಿವಿನ ಕಾರ್ಯಕ್ಕೆ ವಾಹನ ಸವಾರರು ಸಾಥ್ ನೀಡಿದ್ದಾರೆ.

ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಜಂಕ್ಷನ್, ಮುಖ್ಯರಸ್ತೆಗಳಲ್ಲಿ ಹಾಫ್ ಹೆಲ್ಮೆಟ್ ಬಗ್ಗೆ ತಿಳುವಳಿಕೆ ಮೂಡಿಸಿದರು. ಅರ್ಧ ಹೆಲ್ಮೆಟ್ ಧರಿಸಿದರೆ ಉಂಟಾಗುವ ಅನಾಹುತಗಳ ಬಗ್ಗೆ ತಿಳಿ ಹೇಳಿದರು.

ಇದರಿಂದ ಪ್ರೇರಣೆಗೊಂಡ ಬೈಕ್ ಸವಾರರು ಸ್ವಯಂಪ್ರೇರಿತವಾಗಿ ತಾವು ಧರಿಸಿದ್ದ 100ಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಿದರು.

ಇದೇ ವೇಳೆ ದೋಷಪೂರಿತ ಸೈಲೆನ್ಸರ್, ಡಿಫೆಕ್ಟಿವ್ ನೇಮ್ ಪ್ಲೇಟ್ ಹಾಗೂ ಹಾಫ್ ಹೆಲ್ಮೆಟ್ ಗಳನ್ನು ಟಿಪ್ಪರ್ ವಾಹನದ ಮೂಲಕ ನಾಶಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

25/01/2022 06:18 pm

Cinque Terre

33.12 K

Cinque Terre

0

ಸಂಬಂಧಿತ ಸುದ್ದಿ