ಬೆಂಗಳೂರು: ನಗರದಲ್ಲಿ ಯಾವುದೇ ರೌಡಿ ಗುಂಪುಗಳಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಲಾಗಿದೆ. ರೌಡಿಗಳನ್ನು ಸದೆಬಡಿಯಲು ಪ್ರತಿ ಠಾಣೆಯಲ್ಲಿ ಸಬ್ ಇನ್ ಸ್ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ರೌಡಿಗಳ ಪತ್ತೆ ಕಾರ್ಯನಡೆಸಿ ನೊಟೀಸ್ ನೀಡಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲಸ ಮಾಡಿದ್ದೇವೆ. 2021ರಲ್ಲಿ 28 ಗೂಂಡಾ ಕೇಸ್ ಹಾಕಲಾಗಿದೆ. ಜೈಲಿನಲ್ಲಿದ್ದುಕೊಂಡೇ ಕ್ರೈಂ ಚಟುವಟಿಕೆ ನಡೆಸುತ್ತಿದ್ದ 40 ರೌಡಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದೇವೆ.
2021ರಲ್ಲಿ 3700 ಮಾದಕ ದ್ರವ್ಯ ವಸ್ತು ಜಪ್ತಿ ಮಾಡಿದ್ದೇವೆ. ಈ ಪೈಕಿ ಸಿಂಥೆಟಿಕ್ ಡ್ರಗ್ಸ್ ಗಳಾದ ಕೊಕೈನ್, ಹೆರಾಯಿನ್, ಹ್ಯಾಶ್ ಆಯಿಲ್ ಹೆಚ್ಚಾಗಿದೆ. ಕೊಳಗೇರಿ ಪ್ರದೇಶಗಳಲ್ಲಿ ಗಾಂಜಾ ಮತ್ತಿತರ ಡ್ರಗ್ಸ್ ಸರಬರಾಜು ಹೆಚ್ಚಾದರೆ ಶಾಲಾ-ಕಾಲೇಜು ಸೇರಿದಂತೆ ಪ್ರತಿಷ್ಠಿತ ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿವೆ. ನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಡ್ರಗ್ಸ್ ಬಳಕೆ ಮಾಡುವುದು ಕಂಡು ಬಂದಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
PublicNext
07/01/2022 04:21 pm