ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಒತ್ತುವರಿ ರಸ್ತೆ ತೆರವು; ಸ್ಥಳ 'ಆಕ್ರಮಣ' ಕಾರರಿಗೆ ಎಚ್ಚರಿಕೆ

ಆನೇಕಲ್: ಆನೇಕಲ್ ತಾಲೂಕಿನ ಹುಲಿಮಂಗಲ ಗ್ರಾಪಂ ವ್ಯಾಪ್ತಿಯ ಮಾರ್ಗೊಂಡಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ರಸ್ತೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಮಾಡಲಾಗಿದೆ.

ಮಾರ್ಗೊಂಡಹಳ್ಳಿಯ ಸರ್ವೆ ನಂ 53/1 ಹಾಗೂ 53/2 ರಲ್ಲಿ 1.36 ಎಕರೆಯಷ್ಟು ಸರ್ಕಾರಿ ರಸ್ತೆಯನ್ನು ಜಿಎಂ ಇನ್ಫಿನಿಟಿ ಡೆವಲಪರ್ಸ್ ಒತ್ತುವರಿ ಮಾಡಿಕೊಂಡಿತ್ತು. ಅಲ್ಲದೆ, ಸುಮಾರು 20 ಅಡಿ ರಸ್ತೆ ಹಾಗೂ ರಾಜ ಕಾಲುವೆಯನ್ನು ತೆರವು ಮಾಡಿಕೊಂಡು ಶೆಡ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಗ್ರಾಪಂ ಸದಸ್ಯ ಗಜೇಂದ್ರ ಅವರ ದೂರಿನಂತೆ ಸ್ಥಳಕ್ಕೆ ಭೇಟಿ ಕೊಟ್ಟ ಆನೇಕಲ್ ತಹಶೀಲ್ದಾರ್ ದಿನೇಶ್ ನೇತೃತ್ವದಲ್ಲಿ ಒತ್ತುವರಿಯಾಗಿದ್ದ ರಸ್ತೆಯ ಜಾಗವನ್ನು ತೆರವು ಮಾಡಿ ಸಾರ್ವಜನಿಕರು ಓಡಾಡಲು ಅನುವು ಮಾಡಿಕೊಡಲಾಗಿದೆ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ದಿನೇಶ್ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

19/12/2021 10:58 pm

Cinque Terre

470

Cinque Terre

0

ಸಂಬಂಧಿತ ಸುದ್ದಿ