ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣ ವಸೂಲಿ ಆರೋಪ:ಬಿಡಿಎ ಮೇಲೆ ಎಸಿಬಿ ಅಧಿಕಾರಿಗಳ ದಾಳಿ

ಬೆಂಗಳೂರು: ಹಣ ವಸೂಲಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 4 ತಂಡಗಳಾಗಿ ಎಸಿಬಿ ಅಧಿಕಾರಿಗಳು ಇಂದು ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.ಬಿಡಿಎ ಭೂಸ್ವಾಧೀನ ವಿಭಾಗ ಮತ್ತು ಇತರ ವಿಭಾಗಗಳಲ್ಲಿ ಈಗ ಶೋಧ ನಡೆಸಿದ್ದಾರೆ.

ಬಿಡಿಎ ಅಧ್ಯಕ್ಷರು-ಆಯುಕ್ತರು ಹಾಗೂ ಕಾರ್ಯದರ್ಶಿಗಳ ಕಚೇರಿ ಹೊರತು ಪಡಿಸಿ,ಇತರ ಅಧಿಕಾರಿಗಳ ಕೊಠಡಿಗಳ ಮೇಲೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

13 ವಾಹನಗಳಲ್ಲಿ ಬಂದಿದ್ದ 60 ಕ್ಕೂ ಹೆಚ್ಚು ಅಧಿಕಾರಿಗಳು ಈಗ ಪರಿಶೀಲನೆ ನಡೆಸುತ್ತಿದ್ದಾರೆ. ಕಚೇರಿಗೆ ಬಂದಿದ್ದ ಸಾರ್ವಜನಿಕರನ್ನ ಪರಿಶೀಲಿಸಿ ಹೊರಗೆ ಬಿಡುತ್ತಿದ್ದಾರೆ. ಕಚೇರಿ ಮುಖ್ಯದ್ವಾರ ಬಂದ್ ಮಾಡಿ ಎಸಿಬಿ ಅಧಿಕಾರಿಗಳು ಬಿಡಿಎ ಅಧಿಕಾರಿಗಳನ್ನ ಹೊರಗಡೆ ಬಿಡದೇನೆ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

19/11/2021 05:17 pm

Cinque Terre

552

Cinque Terre

0

ಸಂಬಂಧಿತ ಸುದ್ದಿ