ಬೆಂಗಳೂರು: ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ತೆರಿಗೆ ಕಟ್ಟದೇ ಸತಾಯಿಸುತ್ತಿದ್ದದ್ದಕ್ಕೆ ಒಂದೂವರೆ ತಿಂಗಳ ಹಿಂದೆ ಬಿಬಿಎಂಪಿ ಪಾಲಿಕೆ ಅಧಿಕಾರಿಗಳು ಬೀಗ ಜಡಿದಿದ್ದರು.ಈ ವೇಳೆ ಐದೂವರೆ ಕೋಟಿ ಚೆಕ್ ನೀಡಿ 27 ಕೋಟಿ ತೆರಿಗೆ ಬಾಕಿ ಉಳಿಸಿ ಒಂದೂವರೆ ತಿಂಗಳು ಕಾಲಾವಕಾಶ ಕೋರಿತ್ತು ಮಂತ್ರಿ ಮಾಲ್.
ಇದೀಗ ಬಾಕಿ ನೀಡದ ಹಿನ್ನಲೆಯಲ್ಲಿ ಮತ್ತೆ ಬೀಗ ಹಾಕಲು ಬಿಬಿಎಂಪಿ ಮುಂದಾಗಿದೆ, ಆದರೆ
ಆಯುಕ್ತರ ಬಳಿ ಮಂತ್ರಿ ಮಾಲ್ ಮಾಲೀಕ ಮನವಿ ಮಾಡಿ 15 ದಿನಗಳ ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಒಪ್ಪಿದ ಬಿಬಿಎಂಪಿ ನಿಗದಿತ ಸಮಯದೊಳಗೆ ಹಣ ಪಾವತಿಸುವಂತೆ ಮಾಲ್ಗೆ ಗಡುವು ನೀಡಿದೆ.
Kshetra Samachara
15/11/2021 09:23 pm