ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಟ್ಟೆ ಬಿಟ್ಟರೆ ನಿಮ್ಗೆ ಸಿಗೋದಿಲ್ಲ ಪ್ರಶಸ್ತಿ:ಎಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು: ಡೊಳ್ಳು ಹೊಟ್ಟೆ ಕರಗಿಸಿದೇ ಇದ್ದರೇ, ನಿಮ್ಮನ್ನ ಉನ್ನತ ಪ್ರಶಸ್ತಿಗೆ ಶಿಫಾರಸ್ಸು ಮಾಡೋದೇ ಇಲ್ಲ. ದೇಹದ ತೂಕ ಇಳಸಿಬೇಕು. ಫಿಟ್ ಅಂಡ್ ಫೈನ್ ಆಗಿರಬೇಕು. ಹೀಗಂತ ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸರಿಗೆ ಖಡಕ್ ಆಗಿಯೇ ಹೇಳಿದ್ದಾರೆ.

ದೇಹದ ತೂಕ ಹೆಚ್ಚಿಸಿಕೊಂಡು,ಹೊಟ್ಟೆ ಬಿಟ್ಟುಕೊಂಡ ಪೊಲೀಸರಿಗೆ ಈಗ ಒಂದು ರೀತಿ ಇದು ಟಫ್ ಟಾಸ್ಕ್ ಅಂತಲೇ ಹೇಳಬಹುದು.ಆದರೂ ಫಿಟ್ ಅಂಡ್ ಫೈನ್ ಆಗಿರಲು ಇದು ಅವಶ್ಯ ಅನ್ನೋ ಅರ್ಥದಲ್ಲಿಯೇ ಅಲೋಕ್ ಕುಮಾರ್ ಎಲ್ಲರಿಗೂ ತಾಕೀತು ಮಾಡಿದ್ದಾರೆ.

ಬೆಂಗಳೂರಿನ ಕೆ.ಎಸ್ಆರ್.ಪಿ.ಯಲ್ಲಿ ಒಟ್ಟು 1010 ಸಿಬ್ಬಂದಿಗಳಿದ್ದಾರೆ. ಇವರಲ್ಲಿ 162 ಜನ ಪೊಲೀಸರಿಗೆ ಹೊಟ್ಟೆ ಇದೆ. ಈ ಕಾರಣಕ್ಕೇನೆ ಎಲ್ಲರನ್ನೂ ಗ್ರೌಂಡ್ ನಲ್ಲಿ ನಿಲ್ಲಿಸಿ ಅಲೋಕ್ ಕುಮಾರ್ ವಾರ್ನ್ ಮಾಡಿದ್ದಾರೆ. 175 ಸೆಂಟಿಮೀಟರ್ ಇರೋರು 75 ಕೆಜಿ ಇರಬೇಕು.185 ಸೆಂಟಿಮೀಟರ್ ಇರೋರು 95 ಕೆಜಿ ತೂಕ ಇರಬಹುದು. ಅದಕ್ಕಿಂತಲೂ ಜಾಸ್ತಿ ಇರೋ ಹಾಗಿಲ್ಲ ಎಂದು ನೇರಾ ನೇರವಾಗಿಯೇ ಹೇಳಿದ್ದಾರೆ. ಎರಡು ತಿಂಗಳಲ್ಲಿಯೇ ತೂಕ ಇಳಿಸಿಕೊಂಡು ಫಿಟ್ ಅಂಡ್ ಫೈನ್ ಆಗಿರಲೇಬೇಕು ಅಂತಲೂ ಗಡುವು ನೀಡಿದ್ದಾರೆ ಅಲೋಕ್ ಕುಮಾರ್.

Edited By :
Kshetra Samachara

Kshetra Samachara

23/10/2021 03:25 pm

Cinque Terre

188

Cinque Terre

0

ಸಂಬಂಧಿತ ಸುದ್ದಿ